ಹಬ್ಬದ ಸಡಗರಕ್ಕೆ ದರ ಏರಿಕೆ ಬಿಸಿ..!

ತಿಪಟೂರು:
    ಹಬ್ಬ ಎಂದರೆ ಸಡಗರದಿಂದ ಓಡಾಡುವ ಜನರಿಗೆ ಇಂದಿನ ಆಯುದಪೂಜೆಯ ದರಗಳು ಕೇಳಿದರೆ ಸಾರ್ವಜನಿಕರು ಹೆದರುವಂತಾಗಿದ್ದು ಅಳೆದು ತೂಗಿ ಹಣ್ಣುಗಳನ್ನು ಖರೀದಿಯಲ್ಲಿ ತೊಡಗಿದಾರೆ.
     ನಿನ್ನೆ ರಾತ್ರಿ ಸುರಿದ ಬಾರಿಮಳೆಗಿದಿಂದು ನಗರದ ರಸ್ತೆಗಳಲ್ಲಾ ನೀರಿನಿಂದ ಆಯುದಪೂಜೆಗೋಸ್ಕರವೇ ತೊಳೆದಂತಿದ್ದು ಅದರಲ್ಲಿ ತಮ್ಮ ವಾಹನಗಳನ್ನು ಇಳಿಸಿದರೆ ವಾಹನದ ಅಚ್ಚು ರಸ್ತೆಯಲ್ಲಿ ಬಿದ್ದು ಚೆನ್ನಾಗಿರುವ ವಾಹನಗಳೆಲ್ಲಾ ಹಾಳಾಗುತ್ತವೆಂಬ ಭಯದಿಂದ ರಸ್ತೆಗಿಳಿಸಲು ಯೋಚಿಸುವಂತಾಗಿದೆ.
     ಇನು ನಗರದ ಪ್ರಮುಖ ಮಾರುಕಟ್ಟೆಯಾದ ಎ.ಪಿ.ಎಂ.ಸಿಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಂತು ಕೇಳವಹಂಗಿಲ್ಲ ಇಲ್ಲಿ ವಾಹನನಿಲ್ಲಿಸಲು ಸೂಕ್ತವ್ಯವಸ್ಥೆಯೇ ಇಲ್ಲ ಮತ್ತು ರಸ್ತೆಪಕ್ಕ ನಿಲ್ಲಿಸಲು ಸಾಧ್ಯವಾಗದೆ ಕೆಲವರು ವಾಹನಗಳನ್ನು ಮಾರುಕಟೆಯ ಒಳಗೆ ತೆಗೆದುಕೊಂಡು ಹೋಗಿ ಅಲ್ಲಿ ಇಲ್ಲದ ಗೊಂದಲವೇರ್ಪಡುತ್ತಿದೆ.
      ಇನ್ನೂ ಹಿರಿಯರ ಪೂಜೆಗೆ ಈ ಹಬ್ಬದಲ್ಲಿ ವಸ್ತ್ರಗಳನ್ನು ಇಡಲು ಮತ್ತು ಹಣ್ಣುಗಳನ್ನು ತೆಗೆದುಕೊಳ್ಳಲು ಬಂದ ಜನರು ವಸ್ತ್ರಗಳನ್ನೇನೂ ಖರೀದಿಸಿದರು ಆದರೆ ಹಣ್ಣುಗಳನ್ನು ಕೊಳ್ಳಲು ಬಂದವರೇ ಹೌಹಾರುವಂತಹ ದರಗಳನ್ನು ಕೇಳಿ ಅಳೆದು ತೂಗಿ ಹಣ್ಣುಕರೀಸಿದುವುದು ಸಾಮಾನ್ಯವಾಗಿತ್ತು.
      ವಾಹನಪೂಜೆಗೆ ಬಂದ ಕೆ.ಎಸ್.ಆರ್.ಟಿ.ಸಿ ಚಾಲಕ ಮತ್ತು ನಿರ್ವಾಹಕರು ನಮಗೆ ಅನ್ನಕೊಡುವ ವಾಹನದ ಪೂಜೆಯನ್ನು ಮಾಡುವುದು ನಮ್ಮ ಕರ್ತವ್ಯ ಆದರೆ ಬೂದುಗುಂಬಳ ಸುಮಾರಾಗಿದ್ದನ್ನು ಕೇಳದರೆ 100 ರಿಂದ 150 ರೂ ಇನ್ನು ನಿಂಬೆಹಣ್ಣು 10 ರೂ ಇನ್ನು ಅಲಂಕಾರಿಕ ವಸ್ತುಗಳನ್ನು ನಾವೆಲ್ಲಿ ತರುವದು ಎಂದಿದಕ್ಕೆ ಸರ್ಕಾರದಿಂದ ವಾಹನ ಪೂಜೆಗೆ ಹಣ ಕೊಡುವುದಿಲ್ಲವೇ ಎಂದಿದ್ದಕ್ಕೆ ಇಲ್ಲ ನಾವೇ ಏನಾದರೂ ಮಾಡೋಣ ಎಂದು ಮಾಡುತ್ತಿದ್ದೇವೆಂದು ಮಾಡುತ್ತಿದ್ದೇವೆಂದು  ತಿಳಿಸಿದರು.
      ಈ ಬಗ್ಗೆ ಅಲಂಕಾರಿಕ ವಸ್ತುಗಳನ್ನು ಮಾರುತ್ತಿರುವವರನ್ನು ವ್ಯಾಪಾರ ಹೇಗೆ ಎಂದು ಕೇಳಿದ್ದಕ್ಕೆ ವ್ಯಾಪಾರವಿಲ್ಲ ಸಾರ್ ಎಂದು ಇನ್ನೊಬ್ಬರಿಗೆ ಕರೆಮಾಡಿ ಸಾರ್ ಅಲ್ಲೂ ವ್ಯಾಪಾರವಿಲ್ಲ ಸಾರ್ ಈ ಹಬ್ಬವೇ ನನಗೆ ನಮ್ಮ ಜೀವನಕ್ಕೆ ಆಧಾರ ಆದರೆ ಈ ಹಬ್ಬದಲ್ಲೇ ವ್ಯಾಪಾರವಿಲ್ಲ ನಮ್ಮ ಅಸಲು ಬಂದರೆ ಸಾಕೆನಿಸುವಂತಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap