ಹಗರಿಬೊಮ್ಮನಹಳ್ಳಿ
ಪಡಿತರ ಅಕ್ಕಿ ಹಾಗೂ ಹೆಸರು ಕಾಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಗೋದಾಮಿನ ಮೇಲೆ, ಖಚಿತ ಮಾಹಿತಿಯ ಮೇರೆಗೆ ತಹಸೀಲ್ದಾರ್ ಮತ್ತು ಆಹಾರ ಇಲಾಖೆಯ ಶಿರಸ್ತದಾರರು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಶನಿವಾರ ರಾತ್ರಿ ಜರುಗಿದೆ.
ಪಟ್ಟಣದ ವಿಷ್ಣು ಚಿತ್ರಮಂದಿರದ ಆವರಣದಲ್ಲಿರುವ ಗೋದಾಮಿನಲ್ಲಿ ಪಡಿತರ ಅಕ್ಕಿ ಸಂಗ್ರಹ ಆಗಿದೆ ಎನ್ನುವ ಖಚಿತ ಮಾಹಿತಿಯೊಂದಿಗೆ ದಾಳಿನಡೆಸಿದ ತಹಸೀಲ್ದಾರ್ ಆಶಪ್ಪ ಪೂಜಾರ್, ಆಹಾರ ಇಲಾಖೆಯ ಶಿರಸ್ತದಾರ ಮಲ್ಲಿಕಾರ್ಜುನ ಹಾಗೂ ಸಿ.ಪಿ.ಐ ರಾಜೇಶ್ ಸೇರಿ ದಾಳಿ ನಡೆಸಿದರು. ಮಾಲೀಕನಿಗೆ ಕರೆಮಾಡಿದರೆ ಬಾರದಿರುವುದನ್ನು ಕಂಡು ಗೋದಾಮುಗೆ ಹಾಕಲಾಗಿದ್ದ ಬೀಗ ಮುರಿದು ಒಳಹೋಗಿ ನೋಡಿದರೆ, 50ಕೆ.ಜಿ.ಯ 365 ಬ್ಯಾಗ್ ಅಕ್ಕಿ ಹಾಗೂ 50ಕೆ.ಜಿ.ಯ 13 ಬ್ಯಾಗ್ ಹೆಸರುಕಾಳು ಲಕ್ಷಾಂತರ ರೂ.ಮೌಲ್ಯದ ಅಕ್ರಮವಾಗಿ ದಾಸ್ತಾನು ಸಂಗ್ರಹಿಸಲಾಗಿತ್ತು.
ಗೋದಾಮು ಮಾಲೀಕ ಜಿ.ಲಕ್ಷ್ಮೀಪತಿಯವರನ್ನು ತಹಸೀಲ್ದಾರ್ ಕರೆದು ಕೇಳಿದರು. ತಾವು ಶಂಭುಲಿಂಗಯ್ಯ ವರ್ತಕನಿಗೆ ಬಾಡಿಗೆ ನೀಡಲಾಗಿದೆ. ಅದರಲ್ಲಿ ಏನು ಇದೆ ಎಂದು ನಮಗೆ ಮಾಹಿತಿ ಇಲ್ಲವೆಂದು ಹೇಳಿದರು.ಈಗ ವಶಪಡಿಸಿಕೊಂಡಿರುವ ದಾಸ್ತಾನು ಮತ್ತು ಮಾಲೀಕನ ಬಗ್ಗೆ ದೂರು ದಾಖಲು ಮಾಡಿಕೊಂಡಿದ್ದು, ತನಿಖೆಯ ನಂತರ ವಿವರಿಸುವುದಾಗಿ ತಹಸೀಲ್ದಾರ್ ಆಶಪ್ಪ ಪೂಜಾರ್ ತಿಳಿಸಿದರು.ಪಿಎಸ್‍ಐ ಲಕ್ಷ್ಮಣ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.