ಅಭಿಮಾನಿಗಳೊಂದಿಗೆ ಎಸ್‍ಎಆರ್ ಜನ್ಮ ದಿನಾಚರಣೆ

ದಾವಣಗೆರೆ:

       ಬಿಜೆಪಿ ಹಿರಿಯ ಮುಖಂಡ, ಉತ್ತರ ವಿಧಾನಸಭಾ ಕ್ಷೆತ್ರದ ಶಾಸಕ ಎಸ್.ಎ. ರವೀಂದ್ರನಾಥ ಅವರ 73ನೇ ಜನ್ಮದಿನವನ್ನು ಎಸ್‍ಎಆರ್ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಆಚರಿಸಿದರು.

        ಜನ್ಮ ದಿನದ ಹಿನ್ನೆಲೆಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್ ಅವರು ತಮ್ಮ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಶಿರಮಗೊಂಡನಹಳ್ಳಿಯ ದೇವಸ್ಥಾನ, ಶಾಮನೂರಿನ ಆಂಜನೇಯಸ್ವಾಮಿ ದೇವಸ್ಥಾನ, ನಗರ ದೇವತೆ ಶ್ರೀದುರ್ಗಾಂಭಿಕಾ ದೇವಸ್ಥಾನ, ನಿಟುವಳ್ಳಿಯ ದುರ್ಗಾಂಭಿಕಾ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

       ಅಲ್ಲದೆ, ದೇವರಾಜ ಅರಸು ಬಡಾವಣೆಯ ಶಿವಾಲಿ ಟಾಕೀಸ್ ಬಳಿಯಲ್ಲಿರುವ ಅಂಧ ಹೆಣ್ಣು ಮಕ್ಕಳ ಶಾಲೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ, ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡರು.

        ಸಂಸದ ಜಿ.ಎಂ.ಸಿದ್ದೇಶ್ವರ ಅವರು ರವೀಂದ್ರನಾಥ್ ಅವರ ನಿವಾಸಕ್ಕೆ ಆಗಮಿಸಿ, ರವೀಂದ್ರನಾಥ ಅವರಿಗೆ ಶುಭಾಶಯ ಕೋರಿ, ನಂತರ ದೆಹಲಿಗೆ ತೆರಳಿದರು.

         ರವಿಂದ್ರನಾಥ್ ಜನ್ಮ ದಿನದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಸಮೀಪದ ಶಿರಮಗೊಂಡನಹಳ್ಳಿಯಲ್ಲಿನ ಅವರ ನಿವಾಸಕ್ಕೆ ತೆರಳಿ ಜನ್ಮದಿನದ ಶುಭಾಶಯ ಕೋರಿ, ಶುಭ ಹಾರೈಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಎಸ್‍ಎಆರ್ ನಿವಾಸದ ಎದುರು ಜನಸಾಗರವೇ ಜಮಾಯಿಸಿದ್ದ ಕಾರಣ ಎತ್ತ ನೋಡಿದರೂ ಜನಜಂಗುಳಿ ಕಂಡು ಬರುತ್ತಿತ್ತು.

         ಬಿಜೆಪಿ ರಾಜ್ಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ಸಮ್ಮುಖದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ ಬೃಹತ್ ಕೇಕ್ ಕತ್ತರಿಸಿದರು. ಈ ವೇಳೆ ತಮ್ಮ ನಾಯಕನ ಜನ್ಮದಿನಕ್ಕಾಗಿ ಕೆಲವು ಪಕ್ಷದ ಕಾರ್ಯಕರ್ತರು ತಮ್ಮಮ್ಮ ಮೆಚ್ಚಿನ ರಾಷ್ಟನಾಯಕರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಇನ್ನೂ ಕೆಲವರು ಮೈಸೂರು ಪೇಟಾ ಮತ್ತು ಹೂವಿನ ಹಾರ ಹಾಕಿ ಶುಭ ಹಾರೈಸಿದರು.

        ಈ ಸಂದರ್ಭದಲ್ಲಿ ಶಾಸಕರಾದ ಕೆ. ಕರುಣಾಕರ ರೆಡ್ಡಿ, ಪ್ರೊ.ಎನ್.ಲಿಂಗಣ್ಣ, ಮಾಜಿ ಶಾಸಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ಜಿ.ಪಂ. ಅಧ್ಯಕ್ಷೆ ಕೆ.ಆರ್. ಜಯಶೀಲಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ರೈತ ಮುಖಂಡ ಪ್ರೊ.ನರಸಿಂಹಯ್ಯ, ಪಾಲಿಕೆ ಮಾಜಿ ಸದಸ್ಯರಾದ ವಸಂತ ಕುಮಾರ್, ಸಂಕೋಳ್ ಚಂದ್ರಶೇಖರ್, ಉಮಾ ಪ್ರಕಾಶ್, ಜಿ.ಪಂ. ಮಾಜಿ ಸದಸ್ಯ ಮುಕುಂದ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಹೋಟಲ್ ಉದ್ಯಮಿ ಅಣಬೇರು ರಾಜಣ್ಣ. ಮುಖಂಡರಾದ ಬಿ.ಎಂ.ಸತೀಶ್, ಮುಕುಂದ, ಪಿ.ಸಿ. ಶ್ರೀನಿವಾಸ, ಕೆ.ಜಿ ಗುರು, ಮುಖಂಡರಾದ ಧನಂಜಯ್ ಕಡ್ಲೇಬಾಳು, ವಾಸುದೇವ ರಾಯ್ಕರ್, ಜಗದೀಶ್, ಟಿಪ್ಪು ಸುಲ್ತಾನ್, ಕೆ.ಎನ್. ಓಂಕಾರಪ್ಪ, ವೀರೇಶ್ ಹನಗವಾಡಿ, ಪಿ.ಎಸ್.ಜಯಣ್ಣ, ಎಂ.ಮನು, ಶಿವರಾಜ್ ಪಾಟೀಲ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link