ಹೈದರಾಬಾದ್:
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹ್ಯಾಟ್ರಿಕ್ ಸೋಲು ಕಂಡಿದೆ.ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 231 ರನ್ ಪೇರಿಸಿತ್ತು. 232 ರನ್ ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ 113 ರನ್ ಗಳಿಗೆ ಆಲೌಟ್ ಆಗಿದ್ದು 118 ರನ್ ಗಳಿಂದ ಸೋಲು ಕಂಡಿದೆ.
ಹೈದರಾಬಾದ್ ಪರ ಬ್ರೈಸ್ಟೋವ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು 56 ಎಸೆತಗಳಲ್ಲಿ 7 ಸಿಕ್ಸರ್, 12 ಬೌಂಡರಿ ಸಿಡಿಸಿ 114 ರನ್ ಬಾರಿಸಿದ್ದರೆ ಡೇವಿಡ್ ವಾರ್ನರ್ 55 ಎಸೆತಗಳಲ್ಲಿ 5 ಸಿಕ್ಸರ್, 5 ಬೌಂಡರಿ ಸಿಡಿಸಿ 100 ರನ್ ಬಾರಿಸಿದ್ದಾರೆ.ಆರ್‌ಸಿಬಿ ಪಾರ್ಥಿ ಪಟೇಲ್ 11, ಗ್ರಾಂಡ್ಹೋಮ್ 33, ಬರ್ಮನ್ 19 ಹಾಗೂ ಉಮೇಶ್ ಯಾದವ್ 14 ರನ್ ಪೇರಿಸಿದ್ದಾರೆ.ಹೈದರಾಬಾದ್ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ನಬಿ 4, ಸಂದೀಪ್ ಶರ್ಮಾ 2 ವಿಕೆಟ್ ಪಡೆದಿದ್ದಾರೆ.