ಮೆಲ್ಬರ್ನ್:
ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್‍ಗಳ ಅಂತರದಿಂದ ಆಸ್ಟ್ರೇಲಿಯವನ್ನು ಮಣಿಸಿ ಸರಣಿ ಜಯ ಸಾಧಿಸಿದೆ.
ರಿಸ್ಟ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಸ್ಪಿನ್ ಮಾಂತ್ರಿಕ ಚಹಲ್ ಅವರ ಚಮತ್ಕಾರಿ ಬೌಲಿಂಗ್ ದಾಳಿಗೆ ತತ್ತರಿಸಿರುವ ಆಸ್ಟ್ರೇಲಿಯಾ 230 ರನ್‍ಗಳಿಗೆ ಆಲ್ ಔಟಾಗಿದೆ. ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಚಾಹಲ್ ಇತಿಹಾಸ ನಿರ್ಮಿಸಿದರು.
ಇನ್ನು ನಾಯಕ ವಿರಾಟ್ ಕೊಹ್ಲಿ 46 ರನ್ ಗಳಿಸಿ ಸ್ವಲ್ಪದರಲ್ಲಿ ಅರ್ಧಶತಕ ವಂಚಿತರಾದರೂ. ಅವರ ನಿರ್ಗಮನದಿಂದ ಉಂಟಾದ ನಿರಾಸೆ, ಆತಂಕವನ್ನು ಧೋನಿ ನಿವಾರಿಸಿದರು.
ತಂಡ ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸಿ ಅಂತಿಮ ಓವರ್ ವರೆಗೂ ನಡೆದ ಪಂದ್ಯದಲ್ಲಿ ಕೇದಾರ್ ಜಾದವ್ ಹಿರಿಯ ಆಟಗಾರ ಧೋನಿಗೆ ಸಾಥ್ ನೀಡಿ ಬೌಂಡರಿ ಬಾರಿಸುವ ಮೂಲಕ ಭಾರತ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಅಂತಿಮವಾಗಿ ಭಾರತವನ್ನು ಜಯದ ದಡ ತಲುಪಿಸಿ ಸರಣಿ ಗೆಲ್ಲುವಂತೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
