ಬೆಂಗಳೂರು
ರಾಜಭವನದಲ್ಲಿ ಹಾವು, ಬೆಕ್ಕುಗಳ ಹಾವಳಿ ಹೆಚ್ಚಾಗಿದ್ದು, ಹಾವು, ಬೆಕ್ಕುಗಳನ್ನು ಹಿಡಿಯಲು ಮರುಟೆಂಡರ್ ಕರೆಯಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದರು.
ರಾಜಭವನದಲ್ಲಿ ಹಾವು, ಬೆಕ್ಕುಗಳ ಕಾಟ ಹೆಚ್ಚಾಗಿದ್ದರ ಬಗ್ಗೆ ಬಿಬಿಎಂಪಿಗೆ ರಾಜ್ಯಪಾಲರು ಪತ್ರ ಬರೆದಿದ್ದರು. ರಾಜ್ಯಪಾಲರ ಪತ್ರದನ್ವಯ ಹಾವು, ಬೆಕ್ಕುಗಳನ್ನು ಹಿಡಿಯಲು ಟೆಂಡರ್ ಕರೆದು ದರನಿಗದಿಪಡಿಸಿತ್ತು. ಆದರೆ ಒಂದು ಹಾವು ಬೆಕ್ಕು ಹಿಡಿಯಲು ಸುಮಾರು 3 ಸಾವಿರ ದರ ನಿಗದಿಪಡಿಸಲಾಗಿದ್ದು, ಬಿಬಿಎಂಪಿ ದುಬಾರಿ ವೆಚ್ಚ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ ಪ್ರಸಾದ್, ಹಾವು, ಬೆಕ್ಕು ಹಿಡಿಯಲು ದುಬಾರಿ ವೆಚ್ಚ ಮಾಡುತ್ತಿರುವುದು ಸಾಬೀತಾದಲ್ಲಿ ಹಳೆಯ ಗುತ್ತಿಗೆ ರದ್ದುಪಡಿಸಿ ಮರುಟೆಂಡರ್ ಕರೆಯಲಾಗುವುದು ಎಂದರು.
ಹಾವು ಬೆಕ್ಕುಗಳನ್ನು ಹಿಡಿಯುವುದನ್ನು ಪಶುಸಂಗೋಪನೆ ನೋಡಿಕೊಳ್ಳುತ್ತಿದ್ದು, ಇದು ಬಿಬಿಎಪಿ ಆಯುಕ್ತರವರೆಗೆ ಕಡತ ಬರುವುದಿಲ್ಲ .
ರಾಜಭವನದಲ್ಲಿ ಬೆಕ್ಕುಗಳ ಹಾವಳಿ ಹೆಚ್ಚಾಗಿದ್ದು ಹಾವನ್ನು ಹಿಡಿಯಲು ರಾಜ್ಯಪಾಲರು ಬಿಬಿಎಂಪಿಗೆ ದೂರು ನೀಡಿದ್ದರು. ಟೆೆಂಡರ್ ಮೂಲಕವೇ ಪ್ರಕ್ರಿಯೆ ನಡೆಯಬೇಕು. ದುಬಾರಿ ಗುತ್ತಿಗೆಯಾದರೆ ಅದನ್ನು ರದ್ದುಪಡಿಸಿ ಮರುಟೆಂಡರ್ ಕರೆಯಲಾಗುವುದು ಎಂದರು.
ಬಿಬಿಎಂಪಿ ಕಂಟ್ರೋಲ್ ರೂಮಿನಲ್ಲಿ ಸುಬ್ರಹ್ಮಣ್ಯ ಎನ್ನುವ ಅಧಿಕಾರಿ ತಮ್ಮ ಕೆಳಗಿನ ಸಿಬ್ಬಂದಿಯಿಂದ ವೈಯಕ್ತಿಕ ಚಾಕರಿ ಮಾಡಿಸಿಕೊಳ್ಳುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ . ಯಾರೇ ಆಗಲಿ ಕೆಳಹಂತದ ಸಿಬ್ಬಂದಿಯಿಂದ ಚಾಕರಿ ಮಾಡಿಸಿಕೊಳ್ಳುವುದನ್ನು ತಾವು ಸಹಿಸಿಕೊಳ್ಳುವುದಿಲ್ಲ ಎಂದರು.
ಮಹಾಲಕ್ಷ್ಮೀ ಲೇಔಟ್ನಲ್ಲಿ ಬಿಬಿಎಂಪಿ ಸದಸ್ಯರು ಪರಿಶಿಷ್ಟ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಲ್ಯಾಪ್ಟಾಪ್ ಗಳನ್ನು ಇತರೆ ವಿದ್ಯಾರ್ಥಿಗಳಿಗೆ ವಿತರಿಸಿರುವ ಬಗ್ಗೆ ತಮಗೆ ಮಾಹಿತಿಯಿಲ್ಲ.ಮೇಯರ್ ಉಪಮೇಯರ್ ಅನುದಾನದಲ್ಲಿ ಲ್ಯಾಪ್ಟಾಟ್ ವಿತರಿಸಬಹುದಷ್ಟೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
