ಬಿ.ಜೆ.ಪಿ ಬಂಡಾಯ ಅಭ್ಯರ್ಥಿಯಾಗಿ ಡಾ: ಶ್ರೀನಿವಾಸ ಕಣಕ್ಕೆ

ಬಳ್ಳಾರಿ

        ಕಳೆದ ಏಳೆಂಟು ವರ್ಷಗಳಿಂದ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯಾಗಿ ಕಾರ್ಯ ನಿರ್ವಹಿಸಿ ಕೆಲಸ ಮಾಡಿದ್ದೇನೆ ಈ ಹಿಂದೆ ಕಳೆದ ವಿದಾನ ಸಭೆ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಿಂದ ಸ್ಪರ್ದಿಸಲು ಇಚ್ಛಿಸಿದ್ದೆ ಪಕ್ಷದ ವರಿಷ್ಟರಿಗೆ ನನ್ನ ತೀರ್ಮಾನವನ್ನು ತಿಳಿಸಿದ ನಿಮಿತ್ತ ಈ ಚುನಾವಣೆಯಲ್ಲಿ ಬೇಡ ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸಲು ತಮಗೆ ಪಕ್ಷ ಅವಕಾಶ ಕೊಡುತ್ತದೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದರು ಆದುದರಿಂದ ಪಕ್ಷದ ತೀರ್ಮಾನದಂತೆ ಚುನಾವಣೆ ಕಣದಿಂದ ಹಿಂದೆ ಸರಿದಿದ್ದೆ.

        ಈಗ ನನಗೆ ಮೀಸಲು ಕ್ಷೇತ್ರವಾಗಿರುವ ಬಳ್ಳಾರಿ ಲೋಕಸಭೆ ಚುನಾವಣೆಗೆ ಸ್ಪರ್ದಿಸಲು ತಿಳಿಸಿದಾಗ ನನಗೆ ಟಿಕೆಟ್ ನೀಡಲು ನಿರಾಕರಿಸದರು. ಇಲ್ಲಿ ಕುಟುಂಬ ರಾಜಕಾರಣ ಆದುದರಿಂದ ಬಿಜೆಪಿ ಪಕ್ಷಕ್ಕೆ ಪ್ರಾಥಮಿಕ ಸದಸ್ಯತ್ವಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದೇನೆ.
ನಗರದ ದುರ್ಗಮ್ಮ ದೇವಸ್ಥಾನ ಎದುರುಗಡೆ ಇರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಟಿಯನ್ನು ಕರೆದು ಪಕ್ಷವು ನನಗೆ ಸಂಡೂನಿನ ತಾಲ್ಲೂಕು ಪಂಚಾಯಿತಿ,ಗ್ರಾಮ ಪಂಚಾಯಿತಿ,ನನಗೆ ಜವಾಬ್ದಾರಿಯನ್ನು ಹೊರಿಸಿದ್ದಕ್ಕೆ ನಾನು ಬಿಜೆಪಿ ಸದಸ್ಯತ್ವಕ್ಕೆ ಮುನ್ನುಡಿ ಬರೆದಿದ್ದೇನೆ.

        ಈಗ ನನಗೆ ಪಕ್ಷ ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಡೆಗೆ ಸ್ಪರ್ಧಿಸಲಿದ್ದೇನೆ, ಸೋಮವಾರ ನಗರದ ದುರ್ಗಮ್ಮ ದೇವಸ್ಥಾನದಿಂದ ಅಪಾರ ಜನಸ್ತೋಮದೊಂದಿಗೆ ಮೆರವಣಿಗೆಯೊಂದಿಗೆ ವಿಭಿನ್ನ ರೀತಿಯಲ್ಲಿ ನಾಮ ಪತ್ರ ಸಿಲ್ಲಿಸಲಿದ್ದೇನೆ. ಎಂದು ಪತ್ರಿಕಾ ಗೊಷ್ಟಿಯಲ್ಲಿ ತಿಳಿಸಿದರು.ಈ ಸಂದರ್ಭದಲ್ಲಿ ಆಲ್ದಳ್ಳಿ ವೀರೇಶ ಕುರುಬ ಸಂಘದ ಉಪಾಧ್ಯಕ್ಷರು,ಲಕ್ಷ್ಮಿ ಸಮಾಜ ಸೇವಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link