ಹರಿಹರೇಶ್ವರ ದೇವಸ್ಥಾನ ಜೀರ್ಣೋಧಾರದ ಕಡೆ ಗಮನ ಕೊಡಿ : ವಚನಾನಂದ ಶ್ರೀ

ಹರಿಹರ:

     ಹರಿಹರೇಶ್ವರ ಸ್ವಾಮಿಯು 900ವರ್ಷಗಳ ಇತಿಹಾಸವಿರುವ ದೇವಸ್ಥಾನವು ಪುನರ್ ಜೀರ್ಣೋದ್ದಾರವಾಗಬೇಕು, ಹರಿದ್ವಾರದಲ್ಲಿ ಆಗುವಂತಹ ಗಂಗಾಆರತಿ, ಹರಿಹರದಲ್ಲಿ ತುಂಗಾ ಆರತಿ ಆಗಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಪೀಠಾಧಿಪತಿ ಶ್ರೀ ವಚನಾನಂದ ಶ್ರೀಗಳು ಹೇಳಿದರು.

     ನಗರದ ದಸರಾ ಉತ್ಸವ ಸಮಿತಿಯಿಂದ ವಿಜಯದಶಮಿ ಅಂಗವಾಗಿ ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

    ನಗರದ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳ ನೇತೃತ್ವದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮಾಜಿ ಶಾಸಕ ಬಿ.ಪಿ.ಹರೀಷ್, ತಹಶೀಲ್ದಾರ್ ರೇಹಾನ್ ಪಾಷಾ, ನಗರಸಭಾ ಪೌರಾಯುಕ್ತೆ ಎಸ್.ಲಕ್ಷ್ಮೀ, ದಸರಾ ಸಮಿತಿ ಅಧ್ಯಕ್ಷ ಶಂಕರ್ ಖಟಾವಕರ್, ಅಂಬಾರಿ ಮೇಲೆ ವಿರಾಜಮಾನವಾದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚಾನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಆಧ್ಯಾತ್ಮಿಕ ಭಾಷೆಯಲ್ಲಿ ಧಾರ್ಮಿಕ ಪರಂಪರೆಯಲ್ಲಿ ನವ ಶಕ್ತಿಗಳನ್ನು ನಮ್ಮೋಳಗೆ ಜಾಗೃತಿ ಮಾಡುವ ನಿಟ್ಟಿನಲ್ಲಿ ಒಂಬತ್ತು ದಿನಗಳ ಕಾಲ ಉಪವಾಸ ಮಾಡಿ ಇಚ್ಚಾಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ, ಹಾಗೇಯೆ ಹತ್ತನೆ ದಿನವಾದ ವಿಜಯದಶಮಿ ದಿನ ನಾವೂ ಪೂಜೆ ನೇರವೇರಿಸುತ್ತೇವೆ ಎಂದರು.

    ನಮ್ಮ ಕರ್ನಾಟಕದ ಕೇಂದ್ರ ಬಿಂದು ಹರಿಹರವೂ ಮತ್ತೋಂದು ಹರಿದ್ವಾರವಾಗಿ ವಿಶ್ವ ವಿಖ್ಯಾತಿ ಹೊಂದಲಿ ಎಂದರು. ಸ್ಥಬ್ಧ ಚಿತ್ರಗಳು, ವಿವಿಧ ದೇವರ ಉತ್ಸವ ಮೂರ್ತಿಗಳನ್ನು ಹೊತ್ತ ಪಲ್ಲಕ್ಕಿಗಳು ಹಾಗೂ ಅಂಬಾರಿಯಲ್ಲಿ ದೇವಿಯ ಉತ್ಸವ ಮೂರ್ತಿ ಹೊತ್ತ ಆನೆ ರಾಜ ಗಾಂಭೀರ್ಯದಿಂದ ಸಾಗಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ನಂದಿಕೋಲು ಕುಣಿತ, ಡೊಳ್ಳು ಕುಣಿತ, ಸಮಾಳ ವಾದ್ಯ ಮೆರವಣಿಗೆಗೆ ಉತ್ಸಾಹ ತುಂಬಿತು.

    ವಿವಿಧ ವೇಷಭೂಷಣ ಧರಿಸಿದ ಕಲಾವಿದರ ನೃತ್ಯ ನೋಡುಗರಿಗೆ ಮನರಂಜನೆ ನೀಡಿತು.ರಸ್ತೆಯ ಬದಿಯಲ್ಲಿ ಅಂಗಡಿ ಹಾಗೂ ಮನೆಗಳ ಮಾಲೀಕರು ರಸ್ತೆಯನ್ನು ಸ್ವಚ್ಛಗೊಳಿಸಿ, ನೀರು ಹಾಕಿ ಮೆರವಣಿಗೆಗೆ ಸ್ವಾಗತ ಕೋರಿದರು. ಕಟ್ಟಡದ ಮೊದಲ ಅಂತಸ್ತಿನಲ್ಲಿ ಮನೆಯವರು ಮೆರವಣಿಗೆಗೆ ಹೂ ಎರಚುವ ಮೂಲಕ ಸ್ವಾಗತ ಕೋರಿದರು.

     ದಸರಾ ವಿಶೇಷ ಮೆರವಣಿಗೆ ದೇವಸ್ಥಾನದ ರಸ್ತೆ ಮುಖ್ಯ ರಸ್ತೆ, ಮಹಾತ್ಮಗಾಂಧಿ ವೃತ್ತ, ಪಿ.ಬಿ. ರಸ್ತೆಯ ಮೂಲಕ ಜೋಡು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಮುಡಿಯಲು ಸೇರಿತು.ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ. ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ವೃತ್ತ ನೀರಿಕ್ಷಕ ಐ.ಎಸ್. ಗುರುನಾಥ್, ಪಿಎಸ್‍ಐ ರವಿಕುಮಾರ್, ನಗರಸಭಾ ಸದಸ್ಯರಾದ ಎಸ್.ಎಂ. ವಸಂತ್, ನೀತಾ ರಮೇಶ್ ಮೇಹರ್ವಾಡೆ, ದಸರಾ ಸಮಿತಿಯ ಶಿವಪ್ರಕಾಶ ಶಾಸ್ತ್ರಿ, ಮಾಲತೇಶ ಭಂಡಾರೆ, ನಾಗರಾಜ ಐರಣಿ, ಅಜೀತ್ ಸಾವಂತ್, ಪರಶುರಾಮ ಕಾಟ್ವೆ, ರಾಜೂ ರೊಖಡೆ, ವಿವಿಧ ಸಮಾಜಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ದಸರಾ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ