ಬೆಂಗಳೂರು:
ವಾಹನ ಸವಾರರಲ್ಲಿ ಶಿಸ್ತುಪಾಲನೆ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿರುವ ಸಂಚಾರಿ ಪೊಲೀಸರು, ಅಕ್ಟೋಬರ್ 4ರಿಂದ 10ರವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 97,213 ಪ್ರಕರಣ ದಾಖಲಿಸಿ, ಬರೋಬ್ಬರಿ 4.02 ಕೋಟಿ ರೂ.ದಂಡ ವಿಧಿಸಿದ್ದಾರೆ.
ಕಳೆದ ಅ.4 ರಿಂದ ಅ.10ರವರೆಗೆ 4,02,62,800 ರೂಗಳ ದಂಡ ಸಂಗ್ರಹ ಮಾಡಿದ್ದು, ಅದರಲ್ಲಿ ಸುಮಾರು ಒಂದು ಕಾಲು ಕೋಟಿಯಷ್ಟು ಹಣ ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದ ಸಂಗ್ರಹಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
