ಚಾಮರಾಜನಗರ :
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಸೇವೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಸದ್ಯ ನಡೆಸಲಾಗುತ್ತಿರುವ ಸಫಾರಿಗೆ ನಿರ್ಬಂಧ ಹೇರಲಾಗಿದೆ.
ಹೌದು, ಮುಂದಿನ ತಿಂಗಳು ಜೂನ್ 2 ರಿಂದ ಸಫಾರಿ ಜಾಗ ಬದಲಾವಣೆ ಆಗಲಿದೆ. ಬಂಡಿಪುರದಿಂದ ಮೇಲುಕಾಮನಹಳ್ಳಿಗೆ ಸ್ಥಳಾಂತರ ಮಾಡಲಾಗುತ್ತಿದ್ದು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಮೇಲುಕಾಮನಹಳ್ಳಿ ಬರುತ್ತದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ.
ಬಂಡಿಪುರದಲ್ಲಿ ಸಫಾರಿ ಮಾಡುವ ನೆಪದಲ್ಲಿ ಪ್ರವಾಸಿಗರು ಬಂದು ವಾಹನಗಳನ್ನು ಅತೀ ಹೆಚ್ಚಾಗಿ ಪಾರ್ಕಿಂಗ್ ಮಾಡುತ್ತಿದ್ದರು. ಇದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿತ್ತು. ಇನ್ನೊಂದೆಡೆ ಪ್ರವಾಸಿಗರು ತಾವು ತಂದಿದ್ದ ಆಹಾರವನ್ನು ಪ್ರಾಣಿಗಳಿಗೆ ಎಸೆಯುವ ಮೂಲಕ ತೊಂದರೆ ಕೊಡುತ್ತಿದ್ದರು. ಇದಕ್ಕೆಲ್ಲ ನಿರ್ಬಂಧ ಹಾಕಲು ರಾಷ್ಟ್ರೀಯ ಹೆದ್ದಾರಿ 181 ರ ಮಾರ್ಗದಲ್ಲಿರುವ ವಿಶೇಷ ಹುಲಿ ಸಂರಕ್ಷಣಾ ಕ್ಯಾಂಪಸ್ ಗೆ ಸ್ಥಳಾಂತರ ಮಾಡಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ