ದಾವಣಗೆರೆ:
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ರಾಜ್ಯದಾದ್ಯಂತ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸುತ್ತಾ ಬಂದಿದ್ದು, ಈ ಬಾರಿ ನಗರದ ಲೈಫ್‍ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದ ಕಾರ್ಯದರ್ಶಿ ಅನಿಲ್ ಬಾರಂಗಳ್ ಅವರನ್ನು ಬೆಂಗಳೂರಿನ ರೆಡ್ ಕ್ರಾಸ್ ಭವನದ ಹೆನ್ರಿ ಡ್ಯೂನಾಂಟ್ ಸಭಾಂಗಣದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸ್ವಯಂ ಪ್ರೇರಿತ ರಕ್ತದಾನಿ ಈಗಾಗಲೇ 72 ಬಾರಿ ರಕ್ತದಾನ ಮಾಡಿದ್ದು, ರಕ್ತದ ಅವಶ್ಯಕತೆ ಇರುವವರಿಗೆ ತಮ್ಮ ಸಮೂಹದ ಗೆಳೆಯರ ಸಹಕಾರದಿಂದ ರಕ್ತವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಖಾಸಗಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನಿಲ್‍ಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಲೈಫ್‍ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ, ಗೆಳೆಯರ ಬಳಗ ಅಭಿನಂದಿಸಿದೆ.
ರೆಡ್ ಕ್ರಾಸ್ ಸಂಸ್ಥೆ ಸಭಾಪತಿಯು, ಪ್ರಜಾಪ್ರಗತಿಯ ಸಂಪಾದಕರಾದ ಎಸ್.ನಾಗಣ್ಣ, ರಾಜ್ಯ ಉಪ ಪೊಲೀಸ್ ಆಯುಕ್ತ(ಪ.ವಿ)ರವಿ ಡಿ.ಚನ್ನಣ್ಣನವರ್, ಡಾ.ಬಿ.ಎಲ್.ಸುಜಾತಾ ರಾಥೋಡ್, ಕಮಾಂಡೆಂಟ್ ಮೇಜರ್ ಜನರಲ್ ಎನ್.ಜೆ.ಜಾರ್ಜ್, ರೆಡ್ ಕ್ರಾಸ್ ಉಪಾಧ್ಯಕ್ಷ ಡಾ.ಎಂ.ಕೆ.ಶ್ರೀಧರ, ಉಪ ಸಭಾಪತಿ ಡಾ.ವಿ.ಎಲ್.ಎಸ್. ಕುಮಾರ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಚಂದ್ರಶೇಖರ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
