ಹಾವೇರಿ :
ಅನಾವಶ್ಯಕವಾಗಿ ಉಪಚುನಾವಣೆಗೆ ಕಾರಣರಾದರನ್ನು ಮತದಾರರು ಗೆಲ್ಲಿಸುವುದಿಲ್ಲ.ಕಾಂಗ್ರೇಸ್ ಪಕ್ಷ 12ಕ್ಕಿಂತ ಹೆಚ್ಚು ಸ್ಥಾನ ಗೆಲವು ಸಾಧಿಸಲಿದೆ ಈ ಉಪಚುನಾವಣೆ ರಾಜಕೀಯ ಭವಿಷ್ಯತಿನ ದಿಕ್ಸೂಚಿಯಾಗಲಿದೆ ಎಂದು ಕಾಂಗ್ರೇಸ್ ಮುಖಂಡ ಎಚ್.ಕೆ ಪಾಟೀಲ ಹೇಳಿದರು.ನಗರದ ಖಾಸಗಿ ಹೊಟೇಲೊಂದರಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯ ಹಿರೇಕೆರೂರ ಉಪಚುನಾವಣೆ ಕ್ಷೇತ್ರದ ವೀಕ್ಷಕರನ್ನಾಗಿ ಕಾಂಗ್ರೇಸ್ ಪಕ್ಷ 34 ಮುಖಂಡ ತಂಡವನ್ನು ರಚಿಸಿದೆ.ಪ್ರತಿ ಹಳ್ಳಿ ಹೋಬಳಿ,ತಾಪಂ ಮತ್ತು ಜಿ.ಪಂ ಕ್ಷೇತ್ರಗಳವಾರು ಜವಾಬ್ದಾರಿಯನ್ನು ಪಕ್ಷದ ನಾಯಕರಿಗೆ ನೀಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎಚ್ ಬನ್ನಿಕೊಡ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಪಕ್ಷದ ಮುಖಂಡರು ಹಾಗೂ ಆ ಕ್ಷೇತ್ರದ ಕಾರ್ಯಕರ್ತರು ಉತ್ಸುಕರಾಗಿದ್ದಾರೆ ಎಂದರು.
ಅರ್ಹರಾದ ಕಾಂಗ್ರೇಸ್ ಅಭ್ಯರ್ಥಿಗೆ ಜನ ಬೆಂಬಲ :ಹಿರೇಕೆರೂರ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಅಭ್ಯರ್ಥಿ ಬಿ.ಎಚ್ ಬನ್ನಿಕೊಡ 2 ಸುತ್ತಿನ ಪ್ರಚಾರ ಮುಗಿಸಿದ್ದು, ಹೋದ ಪ್ರತಿ ಗ್ರಾಮದಲ್ಲಿಯೂ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಹೋರಾಟಗಾರರಾಗಿ .ರೈತರ ಹಾಗೂ ಬಡ ಕೂಲಿ ಕಾರ್ಮಿಕರ ಪರವಾಗಿ ಕ್ಷೇತ್ರದ ಜನರೊಂದಿಗೆ ನಿರಂತರ ಸೇವೆ ಮಾಡಿದ್ದಾರೆ. ಅನುಭವಶಾಲಿ ಗಳಾದ ಬನ್ನಿಕೊಡ ಅವರನ್ನು ಜನರು ಈ ಬಾರಿ ಅಪ್ಪಿಕೊಂಡು ಜಯಶಾಲಿಗಳಾಗಿ ಮಾಡುವ ನಂಬಿಕೆ ಇದೆ.ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಹಿಂದೆ ಜಾರಿಗೆ ತಂದ ಜನಪರ ಕೆಲಸಗಳಿಗಾಗಿ ಮತದಾರ ಪ್ರಭುಗಳು ಜನರ ನಂಬಿಕೆಗೆ ಅರ್ಹರಾದ ಬಿ.ಎಚ್ ಬನ್ನಿಕೊಡ ಅವರನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಜೆಡಿಎಸ್ ಬೆಂಬಲ :
ಹಿರೇಕೆರೂರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ನೀಡುವ ವಿಶ್ವಾಸವಿದೆ. ಮೈತ್ರಿ ಸರ್ಕಾರಕ್ಕೆ ಮೋಸ ಮಾಡಿ ಹೋದ ಅನರ್ಹ ಶಾಸಕರನ್ನು ಸೋಲಿಸುವ ಉದ್ದೇಶದಿಂದ ಬೆಂಬಲ ಸಿಗಲಿದೆ ಎಂದಿ ಎಚ್.ಕೆ ಪಾಟೀಲ ಹೇಳಿದರು.
ಆಯ್ಕೆಯ ತಿರಸ್ಕಾರಕ್ಕೆ ತಕ್ಕ ಪಾಠ :
2018 ರಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಅರ್ಹ ಅಂತಾ ಜನರು ಆಯ್ಕೆ ಮಾಡಿದ್ದರೂ ನಂತರ ನಡೆದ ಘಟನೆ ನೋಡಿ ಎಂತಹ ಪರಸ್ಥಿತಿ ಬಂದಿದೆ ಎಂದು ಹೋದ ಕಡೆ ಹೇಳುತ್ತಿದ್ದಾರೆ.ಈ ಹಿಂದೆ ನೀಡಿದ ಆಯ್ಕೆಯನ್ನು ತಮ್ಮ ಹಿತಾಸಕ್ತಿಗೊಸ್ಕರ ಜನಮತವನ್ನು ತಿರಸ್ಕರಿಸಿ ಹೋದವರಿಗೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಸಿ ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೇಸ್ ಅಭ್ಯರ್ಥಿ ಬಿ.ಎಚ್ ಬನ್ನಿಕೊಡ ಗೆಲುವಿನ ವಿಶ್ವಾಸ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಎಂ ಹಿರೇಮಠ.ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ.ರುದ್ರಪ್ಪ ಲಮಾಣಿ ಮುಖಂಡರಾದ ಡಿ.ಆರ್ ಪಾಟೀಲ.ಕೊಟ್ರೇಶಪ್ಪ ಬಸೇಗಣ್ಣಿ ಪಕ್ಷದ ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ