ತಿರಸ್ಕೃತ ಐಟಿಐ ಕಾಲೇಜುಗಳ ಪಟ್ಟಿ ಪ್ರವೇಶ ಪ್ರಕ್ರಿಯೆ ಮಾಡದಿರಲು ಸೂಚನೆ

0
14

ಬೆಂಗಳೂರು:

       ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ 2018 ನೇ ಸಾಲಿಗೆ ರಾಜ್ಯ ವೃತ್ತಿ ಶಿಕ್ಷಣ ಪರಿಷತ್ (Sಅಗಿಖಿ) ಅಡಿಯಲ್ಲಿ ಸಂಸ್ಥೆಗಳಿಗೆ ವೃತ್ತಿ/ಘಟಕಗಳ ಸಂಯೋಜನೆಯನ್ನು ತಿರಸ್ಕರಿಸಿರುವುದರಿಂದ ಸದರಿ ಸಾಲಿಗೆ ಪ್ರವೇಶ ಪ್ರಕ್ರಿಯೆ ಮಾಡದೇ ಇರಲು ಸೂಚಿಸಲಾಗಿದೆ.

       ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹರಿಪ್ರಿಯ ಪ್ರೈ. ಐಟಿಐ ಹಾಗೂ ಬಿ.ವಿ.ಎಸ್., ಐಟಿಐ, ತುಮಕೂರಿನ ದಾಬಸ್‍ಪೇಟೆಯಲ್ಲಿರುವ ಮಾರುತಿ ಪ್ರೈ. ಐಟಿಐ, ಶಿರಾ ತಾಲ್ಲೂಕಿನ ತಾವರಕೆರೆಯಲ್ಲಿರುವ ಬಾಲಾಜಿ ಪ್ರೈ, ಐಟಿಐ, ಮಧುಗಿರಿ ತಾಲ್ಲೂಕಿನ ಶ್ರೀ ದತ್ತಾತ್ರೇಯ ಪ್ರೈ. ಐಟಿಐ.

        ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಶ್ರೀ ನಮ್ಮಕೆರೆಮಲೈ ಸಿದ್ದೇಶ್ವರ ಪ್ರೈ. ಐಟಿಐ, ಹಿರಿಯೂರು ತಾಲ್ಲೂಕಿನ ಎಸ್.ಎಸ್. ಪ್ರೈ. ಐಟಿಐ.

          ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಶ್ರೀ ರಾಮಲಿಂಗೇಶ್ವರ ಪ್ರೈ. ಐಟಿಐ. ಕೈಗಾರಿಕಾ ತರಬೇತಿ ಸಂಸ್ಥೆಗಳು ಒಳಪಟ್ಟಿವೆ.
ಒಂದು ವೇಳೆ ಪ್ರವೇಶ ಮಾಡಿಕೊಂಡಲ್ಲಿ ಮುಂದಿನ ಆಗಹೋಗುಗಳಿಗೆ ಸಂಸ್ಥೆಯವರೆ ಪೂರ್ಣ ಜವಾಬ್ದಾರರಾಗಿರುತ್ತಾರೆಂದು ಮತ್ತು ಸಂಸ್ಥೆಗಳಿಗೆ ವೃತ್ತಿ/ಘಟಕಗಳ ಸಂಯೋಜನೆಯನ್ನು ತಿರಸ್ಕರಿಸಿರುವುದರಿಂದ ಸದರಿ ಸಾಲಿಗೆ ಪ್ರವೇಶವನ್ನು ಪಡೆಯಬಾರದೆಂದು ತಿಳಿಸಲಾಗಿದೆ. ಒಂದು ವೇಳೆ ಪ್ರವೇಶ ಪಡೆದಲ್ಲಿ ಮುಂದಿನ ಆಗುಹೋಗುಗಳಿಗೆ ಅಭ್ಯರ್ಥಿಗಳು ಮತ್ತ್ತು ಪೋಷಕರೆ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here