ಆಂಜನೇಯ ಸ್ವಾಮಿ ದೇವಾಲಯದ ನೂತನ ದೀಪದ ಕಂಬ ಪ್ರತಿಷ್ಠಾಪನೆ

ಹರಪನಹಳ್ಳಿ

    ದೇವರ ಹೆಸರಿನಲ್ಲಿ ಮನುಷ್ಯ ಕ್ರೂರಿಯಾಗುತ್ತಿದ್ದಾನೆ. ಬದುಕಿನ ಸಾರ್ಥಕತೆಗೆ ಭಗವಂತನ ಸ್ಮರಣೆ ಮಾಡಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿ ಹೇಳಿದರು.ತಾಲೂಕಿನ ತೆಲಿಗಿ ಗ್ರಾಮದಲ್ಲಿ ಶನಿವಾರ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ದೀಪ ಮಾಲೆ ಕಂಭದ ಪ್ರತಿಷ್ಠಾಪನೆಯನ್ನು ನೇರವೇರಿಸಿ ಮಾತನಾಡಿದರು.

    ಮಾನವನೇ ಸೃಷ್ಠಿ ಮಾಡಿದ ಮೊಬೈಲ್ ಮನುಷ್ಯನಿಗೆ ಕಂಟಕವಾಗಿದೆ. ದೇವಾಲಯಗಳು ಇದ್ದಲ್ಲಿ ಸುಖ, ಶಾಂತಿ ನೆಮ್ಮದಿ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರು ಭಗವಂತನ ಧ್ಯಾನ ಮಾಡಬೇಕು. ದೇವಸ್ಥಾನಗಳಲ್ಲಿ ಮಲಗುವುದು, ಆಟವಾಡುವುದಕ್ಕೆ ಬಳಕೆ ಮಾಡಬಾರದು ಇದರಿಂದ ಸೋಮರಿತನ ಉಂಟಾಗುತ್ತದೆ ಎಂದ ಅವರು ಗ್ರಾಮದಲ್ಲಿ ಅವರಿವರು ಎನ್ನದೇ ಎಲ್ಲರೂ ನಿರಂತರವಾಗಿ ಹನ್ನೊಂದು ದಿನಗಳ ಕಾಲ ಕಪ್ಪು, ಕಡಿ ತಿನ್ನಬೇಡಿ ಎಂದು ಕಿವಿ ಮಾತು ಹೇಳಿದರು.

    ವರ್ಷಕ್ಕೊಂದು ಬಾರಿ ರಥೋತ್ಸವವನ್ನು ಆಚರಿಸುತ್ತಾರೆ. ಮಾನವನು ಒಂದು ರಥ ಇದ್ದಂತೆ, ದೇಹದ ರಥವನ್ನು ಪ್ರತಿನಿತ್ಯ ಎಳೆಯಲು ಮಾನಸಿಕವಾಗಿ ಆರೋಗ್ಯವಂತರಾಗಿ ಆಚರಿಸಬೇಕಾಗುತ್ತದೆ ಎಂದರ.

     ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಮಾತನಾಡಿ ಭಕ್ತಿ, ಸ್ನೇಹ, ಹೃದಯವಂತ ಶ್ರೀಮಂತಿಕೆಯುಳ್ಳವರು ತಾಲೂಕಿನಲ್ಲಿದ್ದಾರೆ. ಮಾನವನ ಸಹಜ ಸ್ವಭಾವದ ಪ್ರಕಾರ ಮಾನವೀಯ ಮೌಲ್ಯಗಳು ಜನರಿಗಿದ್ದು, ಜನರ ಬಳಿಗೆ ಧರ್ಮವನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಹೇಳಿದರು.

      ಆವರಗೊಳ್ಳ ಪುರವರ್ಗ ಹಿರೇಮಠದ ಷ.ಬ್ರ.ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು, ತೆಲಿಗಿ ನಂದಿಲಿಂಗಾಶ್ರಮದ ಶ್ರೀ ಪೂರ್ಣಾನಂದ ಭಾರತಿ ಸ್ವಾಮಿ, ತೆಲಿಗಿ ಜಡೇಸ್ವಾಮಿಮಠದ ಕಿಡಿಗಣ್ಣಯ್ಯಸ್ವಾಮಿ, ಕಲ್ಮಠದ ಗುರುವೃಂದದವರು, ಗೂಳೆಒಡೆಯರ ಮಠದ ಶ್ರೀ ಶರಣಯ್ಯ, ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ಕೆ.ಯೋಗೇಶ್, ಜಿ.ಹಾಲೇಶಪ್ಪ, ಆರ.ರೇವಪ್ಪ, ಪೂಜಾರ ಬಸವರಾಜಪ್ಪ, ಈಡಿಗರ ಜೀವಪ್ಪ, ಕಲ್ಮಠದ ಅಜ್ಜಯ್ಯ, ಸಿದ್ದಲಿಂಗಯ್ಯ, ಪಿ.ಮಹೇಶ್ವರಪ್ಪ, ಹೆಚ್.ಬಿ.ಬಸವರಾಜ, ಕೆ.ಕೊಟ್ರೇಶ್, ರಾಜು ಚನ್ನಗಿರಿ, ಬಾರಿಕರ ಹಾಲೇಶ್, ಕೆ.ಗಣೇಶ್, ಕೆ.ಪಾಂಡುರಂಗ, ಕೆ.ಲೋಕೇಶ್, ಜಿ.ಮಂಜು, ಬಿ.ಬಿ.ಮಂಜುನಾಥ, ಪರುಸಪ್ಪ, ಕೆ.ಹುಚ್ಚಪ್ಪ, ಎಸ್.ನಾಗರಾಜ, ಇ.ರಾಘವೇಂದ್ರ, ಸಾಹಿತಿ ವೀರಭದ್ರಪ್ಪ ಹಾಗೂ ತೆಲಿಗಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link