ಹೊಸದುರ್ಗ
ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೀವತೆತ್ತ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಕನಕ ಮಠದ ಈಶ್ವರನಂದಪುರಿ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ಬೀರಲಿಂಗೇಶ್ವರ ಭವನದಲ್ಲಿ ರಾಯಣ್ಣ ಯುವ ಸೇನೆ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣಾರ್ಥ ಹಾಗೂ ರಾಯಣ್ಣ ಉತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ ಮಾಡಿ ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ಅವರ ಹುತ್ಮಾತ ದಿನದ ಪ್ರಯುಕ್ತ ಸಂಗೊಳ್ಳಿ ರಾಯಣ್ಣ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ರಕ್ತದ ಕಣಕಣದಲ್ಲಿ ದೇಶ ಪ್ರೇಮ, ದೇಶಭಕ್ತಿ ತುಂಬಿತ್ತು. ಕಿತ್ತೂರು ರಾಣಿ ಚೆನ್ನಮ್ಮ ಸೇನೆಯ ಅಧಿಪತಿ ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರ. ಬೆಳಗಾವಿ ಜಿಲ್ಲೆ ಬೈರಹೊಂಗಲ ತಾಲೂಕಿನ ಸಂಗೊಳ್ಳಿ ರಾಯಣ್ಣ ಕುರುಬ ಸಮಾಜದಲ್ಲಿ ಹುಟ್ಟಿದವನು. ಕೇವಲ 32 ವರ್ಷಗಳ ಕಾಲ ಬದುಕಿ ವೀರ ಮರಣ ಹೊಂದಿದ್ದು, ನಮ್ಮೆಲ್ಲರ ದುರಂತ. ಅವರಂತೆ ನಾವೆಲ್ಲರೂ ದೇಶಭಕ್ತಿ, ದೇಶಪ್ರೇಮ ಬೆಳೆಸಿಕೊಂಡು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಭದ್ರ ರಾಷ್ಟ್ರ ಕಟ್ಟೋಣ ಎಂದರು.
ನೀಕೇತ್ ರಾಜ್ ಮಾತನಾಡಿ, ಬಡವರ ಭೂಮಿಯನ್ನು ಕಸಿದು ಕೊಳ್ಳುತ್ತಿದ್ದ ಬ್ರಿಟಿಷರ ವಿರುದ್ಧವೇ ಸಿಡಿದು ನಿಂತ ಕ್ರಾಂತಿಕಾರ ವೀರ ಸಂಗೊಳ್ಳಿ ರಾಯಣ್ಣ, ಗೆರಿಲ್ಲಾ ಯುದ್ಧ ದ ಹರಿಕಾರ ಎಂದೇ ಖ್ಯಾತಿಹೊಂದಿದ್ದ ರಾಯಣ್ಣನ ಸಾಧನೆ, ದೇಶ ಸೇವೆ ಅಪ್ರತಿಮವಾದುದು ಎಂದು ಹೇಳಿದರು.
ಇದೇ ವೇಳೆ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಂಜುನಾಥ್, ಜಿ.ಪಂ ಸದಸ್ಯ ಮತ್ತು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್, ಮುಖಂಡರಾದ ಎಂ.ಹೆಚ್.ಕೃಷ್ಣಮೂರ್ತಿ, ಆಗ್ರೋ ಶಿವಣ್ಣ, ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್ಸ್ ಸಂಸ್ಥಾಪಕ ಮಚೇನಹಳ್ಳಿ ರಾಮಕೃಷ್ಣ ( ರಾಮ್ಕಿ), ವಕೀಲ ಚಂದ್ರಶೇಖರ್ ಹಾಗೂ ಇನ್ನೂ ಮುಂತಾದ ಮುಖಂಡರುಗಳು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ