ಜೂ 6ಕ್ಕೆ ಶ್ರೀ ರೇಣುಕಾಚಾರ್ಯ ಜಯಂತಿ

ಕೊರಟಗೆರೆ:-

       ತಾಲ್ಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಜೂ.5 ರಮದು ವಿಶ್ವ ಪರಿಸರ ದಿನದ ಅಂಗವಾಗಿ 5 ಸಾವಿರ ಸಸಿಗಳನ್ನು ರೈತರಿಗೆ ಕೊಡುವ ಕೆಲಸವನ್ನು ಮಾಡಲಾಗುವುದು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

       ಅವರು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಮಠದಲ್ಲಿ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಜೂ. 6 ರಂದು ನಡೆಯುವ 13ನೇ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗು ಜನಜಾಗೃತಿ ಧರ್ಮ ಸಮಾರಂಭದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರೈತರು, ಜಾನುವಾರುಗಳು ಮತ್ತು ಜನರು ಮಳೆಯಿಲ್ಲದೆ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದು, ಮರಗಿಡಗಳು ಮತ್ತು ಪ್ರಾಕೃತ್ಯಕ ಸಂಪನ್ಮೂಲಗಳನ್ನು ನಾಶಮಾಡುತ್ತಿರುವುದೆ ಮಳೆಯ ಅಭಾವಕ್ಕೆ ಕಾರಣವಾಗಿದೆ. ಆದ್ದರಿಂದ ಸಿದ್ದರಬೆಟ್ಟದಲ್ಲಿ ನಡೆಯುವ 13ನೇ ವಾರ್ಷಿಕೋತ್ಸವದ ಅಂಗವಾಗಿ ಜೂ.5 ರಂದು ರೈತರಿಗೆ ಅರಣ್ಯ ಇಲಾಖೆಯ ಜೊತೆಗೂಡಿ ಸುಮಾರು 5 ಸಾವಿರ ಸಸಿಗಳನ್ನು ನೀಡಲಾಗುವುದು, ಜೂನ್ ತಿಂಗಳಲ್ಲಿ ಮಳೇ ಗಾಲ ಆರಂಭವಾಗಲಿದ್ದು, ಸಸಿಗಳು ಬೆಳೆದು ಮರವಾದರೆ ಮತ್ತಷ್ಟು ಮರಗಳನ್ನು ಬೆಳೆಸುವ ಉದ್ದೆಶ ಹೊಂದಲಾಗಿದೆ ಎಂದರು. ಅಂದು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಉಚಿತವಾಗಿ ವೈದ್ಯಜೀಯ ತಪಾಸಣೆ ಸಹ ನಡೆಸಲಾಗುವುದು ಎಂದರು.

       ಬಿಬಿಎಂಪಿ ಸದಸ್ಯ ನಟರಾಜು ಮಾತನಾಡಿ, ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ 13 ನೇ ವಾರ್ಷಿಕೋತ್ಸವದಂದು ನಡೆಯುವ ಕಾರ್ಯಕ್ರಮಕ್ಕೆ ಸಂಪನ್ಮೂಲ ಕ್ರೂಡೀಕರಣವಾಗಬೇಕು ಮಠ ಮಾನ್ಯಳಿಗೆ ಭಕ್ತಿಯಿಂದ ದೇಣಿಗೆ ನೀಡಿದರೆ ಅದು ನಮ್ಮ ಸುತ್ತಮುತ್ತಲ ಜನಗಳಿಗೆ ಮತ್ತು ಬಡ ವಿದ್ಯಾತಿಗಳಿಗೆ ಅನ್ನ ದಾನ, ವಿದ್ಯಾ ದಾನ, ಮತ್ತು ಒಸತಿ ದಾನಗಳಾಗಿ ಮಾರ್ಪಾಡಾಗಿ ಉತ್ತಮ ಸಮಾಜ ನಿರ್ಮಾಣವಾಗಲು ಸಹಾಯವಾಗುತ್ತದೆ ಎಂದರು.

       ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್ ಮಾತನಾಡಿ, ಜೂ.6 ರಂದು ನಡೆಯುವ 13ನೇ ವಾರ್ಷಿಕೋತ್ಸವದಲ್ಲಿ ಎಲ್ಲಾ ಭಕ್ತಾಧಿಗಳು ನಿಖರವಾದ ಯೋಜನೆಯನ್ನು ರೂಪಿಸಿ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕಿದೆ. ಎಲ್ಲರು ಒಟ್ಟಾಗಿ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ಕ್ರೂಡಿಕರಣದೊಂದಿಗೆ ಶ್ರಮವಹಿಸಿ ಸೇವೆ ಮಾಡಬೇಕು ಎಂದರು.

       ಇದೇ ಸಂದರ್ಭದಲ್ಲಿ ಜೂ.6 ರಂದು ನಡೆಯುವ 13ನೇ ವಾರ್ಷಿಕೋತ್ಸವದಲ್ಲಿ ಉಚಿತ ಸಮೂಹಿಕ ವಿವಾಹ ಮಹೋತ್ಸವವು ನಡೆಯಲಿದ್ದು, ಅಂದು ನಡೆಯುವ ವಿವಾಹ ಮಹೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ವಧುಗಳಿಗೆ ಮಾಂಗಲ್ಯಗಳನ್ನು ಕಳುಹಿಸಿದ್ದು, ಅದನ್ನು ಕೊರಟಗೆರೆಯ ಶ್ರೀ ಧರ್ಮಸ್ಥಳ ಳ ಅಭಿವೃದ್ದೀ ಯೋಜನಾಧಿಕಾರಿ ಶ್ರೀನಿವಾಸ್‍ರವರು ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಗೆ ನೀಡಿದರು.

       ಸಭೆಯಲ್ಲಿ ಪ.ಪಂ ಸದಸ್ಯ ಎ.ಡಿ.ಬಲರಾಮಯ್ಯ, ಗ್ರಾಪಂ ಅಧ್ಯಕ್ಷ ನಂದೀಶ್, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಸಿದ್ದಮಲ್ಲಪ್ಪ, ಸದಸ್ಯರುಗಳಾದ ಮಲ್ಲಣ್ಣ, ಶಿವಾನಂದ, ಮುಖಂಡರುಗಳಾದ ಪಂಚಾಕ್ಷರಯ್ಯ, ಪರ್ವತಯ್ಯ, ದ್ವಾರಕೀನಥ್, ದೊಡ್ಡೇಗೌಡ, ರೋಟರಿ ಗಂಗಾಧರ್ ಶಾಸ್ತ್ರಿ, ನಬೀಉಲ್ಲಾ ಖಾನ್, ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap