ತಿಪಟೂರು
ಸರ್ಕಾರಿ ಕಂದಾಯಗಳನ್ನು ಕಟ್ಟದಿರುವ ಈ ಸಂದರ್ಭದಲ್ಲಿ ಕಂದಾಯವನ್ನು ಕಟ್ಟಲು ಬರುವ ಸಾರ್ವಜನಿಕರಿಗೆ ವಿದ್ಯುತ್ ಸಹಕಿರಿಕಿರಿಮಾಡುತ್ತಿದ್ದು ಇದಕ್ಕೆ ನಗರಸಭೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆಇಲ್ಲವೆಂದು ಸಾರ್ವಜನಿಕರು ಹಿಡಿಶಾಪಹಾಕುತ್ತಿದ್ದಾರೆ.
ನಗರಸಭೆಗೆ ಕಂದಾಯಕಟ್ಟಲು ಬರುತ್ತಿರುವದ್ದು ಇದರಿಂದಲೇ ನಗರಸಭೆಗೆ ಲಕ್ಷಾಂತರ ರೂಪಾಯಿ ಆದಾಯವಿದೆ,
ಆದರೆ ಇಂತಹ ಕಂದಾಯಕಟ್ಟಲು ತಮ್ಮ ಕೆಲಸಕಾರ್ಯಗಳನ್ನು ಬಿಟ್ಟು ಬರುವ ಸಾರ್ವಜನಿಕರಿಗೆ ವಿದ್ಯುತ್ ಸಮಸ್ಯೆಇದೆ ಎಂದು ಹೇಳಿ ನಗರಸಭೆಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆಂದು ಕಂದಾಯ ಕಟ್ಟಲು ಬಂದ ಸಾರ್ವಜನಿಕರು ಆರೋಪಿದರು.
ನಮ್ಮ ತೆರಿಗೆ ಹಣದಿಂದಲೇ ವಿದ್ಯುತ್ ಪರಿವರ್ತಕವನ್ನು (ಯು.ಪಿ.ಎಸ್) ಹಾಕಿಸಿಕೊಂಡು ನಮಗೆ ಸಹಾಯಮಾಡಿ ನಾವು ಹಿರಿಯನಾಗರೀಕರು ಮತ್ತು ನಮಗೆ ಈ ಬಿಸಲಿನಲ್ಲಿ ಹೆಚ್ಚುಒತ್ತು ನಿಲ್ಲಾಗುವುದಿಲ್ಲ ಮತ್ತು ಹಿಂದೆ ಪತ್ರಿಕೆಯಲ್ಲಿ ವರದಿಯಾದಂತೆ ಸರಿಯಾಗಿ ಬಿಲ್‍ಗಳನ್ನು ನೀಡುತ್ತಿಲ್ಲ ಅವುಗಳನ್ನು ಪರೀಕ್ಷಿಸುವ ಸಲುವಾಗಿಯೇ ಬಂದಿದ್ದು ಈಗ ವಿದ್ಯುತ್ ಇಲ್ಲವೆಂದು ಹೇಳುತ್ತಿದ್ದಾರೆ ನಾವು ಮತ್ತೆ ಬರಬೇಕು ಆದರೆ ಮತ್ತೆ ಬಂದಾಗ ವಿದ್ಯುತ್ ಇರುತ್ತೋ ಇಲ್ಲವೋ ಎಂಬುದೇ ಸಮಸ್ಯೆಯಾಗಿದ್ದು ಇದಕ್ಕೆ ಸೂಕ್ತವ್ಯವಸ್ಥೆಯನ್ನು ಮಾಡಬೇಕೆಂದು ನಾಗರೀಕರು ತಿಳಿಸಿದರು.ಈ ಬಗ್ಗೆ ನಗರಸಭೆ ಆಯುಕ್ತರನ್ನು ಕೇಳಿದ್ದಕ್ಕೆ ನಾನು ಬಂದು ಪರೀಕ್ಷಿಸುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
