ಯಳನಾಡು : ಚರಂಡಿ ದುರಸ್ತಿಗೆ ಆಗ್ರಹ

ಹುಳಿಯಾರು

   ಹುಳಿಯಾರು ಹೋಬಳಿಯ ಯಳನಡು ಉಣ್ಣೆ ನೇಕಾರರ ಭವನದ ಮುಂದಿನ ಚರಂಡಿ ದುರಸ್ತಿ ಮಾಡುವಂತೆ ಇಲ್ಲಿನ ನಿವಾಸಿ ಮೈಲಾರಿ ಮನವಿ ಮಾಡಿದ್ದಾರೆ.ಚರಂಡಿ ತುಂಬಾ ಹದಗಟ್ಟಿದ್ದು, ಕಸ, ಕಡ್ಡಿ, ತಾಜ್ಯ ಪದಾರ್ಥಗಳು ಎತೇಚ್ಯವಾಗಿ ತುಂಬಿಕೊಂಡು ಚರಂಡಿಗಳು ಮುಚ್ಚಿಹೋಗಿವೆ. ಸ್ವಚ್ಛಗೊಳಿಸದೆ ಹಾಗೇ ಬಿಟ್ಟಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.

    ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಕನಸನ್ನು ನನಸು ಮಾಡಲು ದೇಶದಾದ್ಯಂತ ಅಬ್ಬರದ ಪ್ರಚಾರ ಮಾಡುತ್ತಿದ್ದರೆ ಯಳನಾಡು ಗ್ರಾಮಗಳಲ್ಲಿ ಅದರ ವಿರುದ್ಧವಾಗಿ ಅಶುಚಿತ್ವ ತಾಂಡವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಚರಂಡಿ ಕಾಮಗಾರಿ ಮಾಡಲು ಗ್ರಾಪಂಗೆ ಸುಮಾರು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸದಸ್ಯರೂ ಕೂಡ ಕಾಮಗಾರಿ ಮಾಡಲು ಮುಂದೆ ಬರುತ್ತಿಲ್ಲ ಗ್ರಾಪಂನ ಪಿಡಿಒ, ಕಾರ್ಯದರ್ಶಿಗಳು ಗ್ರಾಮ ಸಂಚಾರ ಮಾಡಿ ವರ್ಷಗಳೇ ಕಳೆದಿದೆ.

   ಎಂದು ಆರೋಪಿಸಿದ್ದಾರೆ.ತಾಪಂ ಕಾರ್ಯನಿರ್ವಾಹಣಾಧಿಕಾರಿಗಳಾದರೂ ಇತ್ತ ಗಮನ ಹರಿಸಿ ಮೊದಲು ಚರಂಡಿ ಕ್ಲೀನ್ ಮಾಡಿಸಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಿ ನಂತರ ಚರಂಡಿ ದುರಸ್ತಿ ಮಾಡಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಮುಂದಾಗಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link