ಪತ್ರಕರ್ತರು ಆರೋಗ್ಯದ ಕಡೆಗೂ ನಿಗಾವಹಿಸಲಿ :ಪ್ರಭುಸ್ವಾಮಿ

ದಾವಣಗೆರೆ

      ನಿತ್ಯವೂ ಒತ್ತಡಗಳ ಮಧ್ಯೆಯೇ ಕಾರ್ಯ ನಿರ್ವಹಿಸುವ ಮಾಧ್ಯಮ ಸಿಬ್ಬಂದಿ ತಮ್ಮ ವೈಯಕ್ತಿಕ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಪಾಲಿಕೆ ಉಪ ಆಯುಕ್ತ ಪ್ರಭುಸ್ವಾಮಿ ತಿಳಿಸಿದರು.

      ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸುವರ್ಣ ಸೌಧದಲ್ಲಿ ಭಾನುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವರದಿಗಾರರ ಕೂಟ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಕೋವಿಡ್-19 ಸೋಂಕಿನ ನಂತರ ಮೂತ್ರಪಿಂಡ ಆರೈಕೆ ಕುರಿತ ಉಪನ್ಯಾಸ, ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ನಮ್ಮ ಕೆಲಸಗಳ ಮಧ್ಯೆ ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

     ಪಾಲಿಕೆ ವ್ಯಾಪ್ತಿಯ 35 ವಾರ್ಡ್‍ಗೆ ವಾಚನಾಲಯ ತೆರೆಯಲು ಸಂಘದ ಮನವಿಗೆ ಪಾಲಿಕೆ ಒಪ್ಪಿಗೆ ಸೂಚಿಸಿದೆ. ಪಾಲಿಕೆ ವ್ಯಾಪ್ತಿಯ ಆಯಾ ವಾರ್ಡ್‍ನಲ್ಲಿ ಸಂಬಂ„ಸಿದ ಜಾಗ ಗುರುತಿಸುವ ಕಾರ್ಯ ನಡೆದಿದೆ. ಬೆಂಗಳೂರು, ಶಿವಮೊಗ್ಗದಲ್ಲಿ ಇರುವಂತೆ ದಾವಣಗೆರೆಯಲ್ಲೂ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕೆ ಸಂಘ ಮನವಿ ಮಾಡಿದ್ದು, ಪಾಲಿಕೆ ಆಯುಕ್ತರ ಬಳಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಇಂದಿನ ಸುದ್ದಿ ಪತ್ರಿಕೆ ಸಂಪಾದಕ ವೀರಪ್ಪ ಎಂ.ಭಾವಿ ಮಾತನಾಡಿ, ರಾಜಕಾರಣಿಗಳು, ಯಾವುದೇ ಅ„ಕಾರಿಗಳು, ವಿವಿಧ ಇಲಾಖೆಗಳು, ಸಾರ್ವಜನಿಕರ ಸಮಸ್ಯೆ, ತೊಂದರೆಗೂ ಸ್ಪಂದಿಸುತ್ತೇವೆ . ಆದರೆ ಪತ್ರಕರ್ತರಿಗೆ ತೊಂದರೆಯಾದರೆ ಯಾರೂ ಸ್ಪಂದಿಸುವುದಿಲ್ಲ ಎಂದು ವಿಷಾದಿಸಿದರು.

     ಮಣಿಪಾಲ್ ಆಸ್ಪತ್ರೆ ಹಿರಿಯ ಅ„ಕಾರಿಗಳೊಂದಿಗೆ ಚರ್ಚಿಸಿ ಪತ್ರಕರ್ತರಿಗೆ, ಶೇ.20ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಕಾರ್ಡ್ ವಿತರಿಸುತ್ತಿರುವುದು ಮಾದರಿ ಕಾರ್ಯ. ಅದನ್ನು ಇನ್ನೂ 20 ರಷ್ಟು ಹೆಚ್ಚಿನ ರಿಯಾಯಿತಿ ನೀಡಬೆಕು.ಕುಟುಂಬದವರಿಗೂ ಅದನ್ನು ವಿಸ್ತರಿಸುವಂತೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.ಹಿಂದೆ ಪಾಲಿಕೆ ಆಯುಕ್ತರು, ಮೇಯರ್‍ಗೆ ಬೆಂಗಳೂರು, ಶಿವಮೊಗ್ಗ ಮಾದರಿಯಲ್ಲಿ ದಾವಣಗೆರೆಯಲ್ಲೂ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ, ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಗಿದ್ದು, ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅವರು ಆಗ್ರಹಿಸಿದರು.

     ವರದಿಗಾರರ ಕೂಟದ ಅಧ್ಯಕ್ಷ ಜಿಎಂಆರ್ ಆರಾಧ್ಯ, ಸಂಘದ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಕೆ.ಚಂದ್ರಣ್ಣ, ಪ್ರಧಾನ ಕಾರ್ಯದರ್ಶಿ ಇ.ಎಂ.ಮಂಜುನಾಥ, ಖಜಾಂಚಿ ಮಂಜಪ್ಪ ಮಾಗನೂರು, ಮಣಿಪಾಲ್ ಆಸ್ಪತ್ರೆ ಪ್ರತಿನಿಧಿಗಳಾದ ಅರುಣ ಚಕ್ರವರ್ತಿ, ಅಮಿತ್ ನಾರಾಯಣ ಸೇರಿದಂತೆ ಸಂಘ-ಕೂಟದ ಪದಾಧಿಕಾರಿಗಳು ಇದ್ದರು. ವಾರ್ತಾ ಇಲಾಖೆ ಬಿ.ಎಸ್.ಬಸವರಾಜ ಪ್ರಾರ್ಥಿಸಿದರೆ, ಮಂಜುನಾಥ ಪಿ.ಕಾಡಜ್ಜಿ ಸ್ವಾಗತಿಸಿದರು. ಆನ್‍ಲೈನ್ ಮೂಲಕ ಡಾ.ಎಸ್.ವಿಶ್ವನಾಥ ಮೂತ್ರಪಿಂಡ ಆರೈಕೆ ಕುರಿತು ಉಪನ್ಯಾಸ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap