ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

ಬಳ್ಳಾರಿ

            ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯು ಅಧಿಕೃತ ಕನ್ನಡ ಸಂಘಟನೆಯೆಂದು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯವು ಕಳೆದ ಏಪ್ರಿಲ್ 25ರಂದೇ ಶಾಶ್ವತ ನಿರ್ಭಂಧಕಾಜ್ಞೆಯನ್ನು ಹೊರಡಿಸಿದೆ. ಯಾರಾದರು ಅನಾಧಿಕೃತವಾಗಿ ವೇದಿಕೆಯ ಹೆಸರನ್ನು ದುರುಪಯೋಗ ಪಡಿಸಿಕೊಂಡರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಬಳ್ಳಾರಿ ಜಿಲ್ಲಾ ಘಟಕವು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಅವರಿಗೆ ಮನವಿ ಸಲ್ಲಿಸಿತು.

         ಕರ್ನಾಟಕ ರಕ್ಷಣಾ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿಯಾದ ನಿಯೋಗವು, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ 2006 ರ ಅಕ್ಬೋಬರ್ 10 ರಂದು ಕರ್ನಾಟಕ ರಕ್ಷಣಾ ವೇದಿಕೆಯು ಸಿವಿಲ್ ದಾವೆಯನ್ನು ಹೂಡಿ ವೇದಿಕೆಯ ಹೆಸರನ್ನು ಬಣಗಳ ರೂಪದಲ್ಲಿ ದುರ್ಬಳಕೆ ಮಾಡಿಕೊಳ್ಳುವವರ ಶಾಶ್ವತ ನಿರ್ಬಂಧಕಾಜ್ಞೆಯನ್ನು ಕೋರಿ ಅರ್ಜಿ ಸಲ್ಲಿಸಿತ್ತು.

         ಇದನ್ನು ಪರಿಗಣಿಸಿದ ನ್ಯಾಯಾಲಯವು ವಾದ ಉಪವಾದಗಳನ್ನು ಕೇಳಿ ಸಾಕ್ಷಾಧಾರಗಳನ್ನು ಪರಿಶೀಲಿಸಿದೆ. ಇದಕ್ಕೆ ಪೂರಕ ಸಾಕ್ಷಿಗಳನ್ನು ಹಾಜರು ಪಡಿಸಿರುವ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯು ಅಧಿಕೃತ ಕಾನೂನು ಬದ್ದ ವೇದಿಕೆಯೆಂದು ತೀರ್ಮಾನಿಸಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

          ಇದಕ್ಕೂ ಮುನ್ನ ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಪದಾಧಿಕಾರಿಗಳು ಸಮಾವೇಶಗೊಂಡು ಚರ್ಚಿಸಿದರು. ಬಳಿಕ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಗೆ ತೆರಳಿ, ನ್ಯಾಯಾಲಯದ ಸುಮಾರು 36 ಪುಟಗಳ ಆದೇಶ ಪ್ರತಿಗಳೊಂದಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಜಿಲ್ಲೆಯಲ್ಲಿ ಯಾರಾದರೂ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರನ್ನು ಹಾಗೂ ಲಾಂಛನವನ್ನು ದುರ್ಬಳಕೆ ಮಾಡಿಕೊಂಡರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದರು.

          ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷರು ಹಾಗೂ ವಕೀಲರು ಆರ್.ವೈ. ಹನುಮಂತರೆಡ್ಡಿ, ಮೃತ್ಯುಂಜಯಸ್ವಾಮಿ, ಅಂಗಡಿ ಡಿ.ಕಗ್ಗಲ್ ಶಂಕರ್, ಕೋಳೂರು ತಿಪ್ಪಾರೆಡ್ಡಿ, ಸೂರ್ಯಪ್ರಕಾಶ್‍ರೆಡ್ಡಿ, ಮೃತ್ಯುಂಜಯಸ್ವಾಮಿ, ಶಿವಕುಮಾರ್, ಚಂದ್ರಮೋಹನ್, ತೋಟದ ವಿರೇಶ್, ಮುಂಡ್ರಿಗಿ ರಾಜಶೇಖರ್, ಬೆಲ್ಡೋಣಿ ನಾಗರಾಜ, ಕಂಫ್ಲಿ ತಾಲ್ಲೂಕು ಅಧ್ಯಕ್ಷರಾದ ಮೆಟ್ರಿ ಯರ್ರಿಸ್ವಾಮಿ, ಸಿರುಗುಪ್ಪ ತಾಲ್ಲೂಕು ಅಧ್ಯಕ್ಷರಾದ ರಮೇಶ್, ಹುಬ್ಬಳ್ಳಿ ರಾಜು, ದೇವರಾಜ, ಮದಿರೆ ಮಲ್ಲಿಕಾರ್ಜುನ, ಕೊಳಗಲ್ಲು ಹುಸೇನ್, ವಿರುಪಾಕ್ಷಿ, ಶಬರಿ ರವಿ, ಮಲ್ಲಿಕಾರ್ಜುನ ಚಾನಾಳ್, ವಿರೇಶ್, ಮಸ್ಕಿ ಮಹಾಂತೇಶ್, ಇನ್ನು ನೂರಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap