ಕಳಪೆ ಬೀಜ ಸಂಗ್ರಹಣೆ: ಮಾಲೀಕನ ವಿರುದ್ಧ ಕ್ರಮಕ್ಕೆ ಮನವಿ

ಹಾವೇರಿ

        ಜಿಲ್ಲೆಯ ವ್ಯಾಪ್ತಿಯಲ್ಲಿ ಕಳಪೆ ಗೋವಿನಜೋಳದ ಬೀಜವನ್ನು ಸಂಗ್ರಹಣೆ ಮಾಡಿದ ಕೋಲ್ಡ್ ಸ್ಟೋರೇಜ್ ಮಾಲಕರ ಮತ್ತು ವ್ಯಾಪಾರಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೊಡಿ ಲೈಸೆನ್ಸ್ ರದ್ದು ಪಡಿಸಿ ವಶಪಡಿಸಿಕೊಂಡ ಕಳಪೆ ಬೀಜವನ್ನು ನಾಶಪಡಿಸಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ರೈತ ಸಂಘದ ಬ್ಯಾಡಗಿ ತಾಲ್ಲೂಕ ಘಟಕ ವತಿಯಿಂದ ಬ್ಯಾಡಗಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

      ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹನಮಂತಪ್ಪ ದಿವೀಗಿಹಳ್ಳಿ ಮಾತನಾಡಿ ರೈತರು ಅಂಗಡಿಗಳ ಮೇಲೆ ವಿಶ್ವಾಸವಿಟ್ಟು ಬೀಜ ಖರೀದಿಸಲು ಮುಂದಾಗುತ್ತಾರೆ. ಸರ್ಕಾರ ಹಾಗೂ ಕೃಷಿ ಅಧಿಕಾರಿಗಳು ಅಂಗಡಿಗಳ ಮೇಲೆ ನಿರಂತರವಾಗಿ ದಾಳಿ ಮಾಡಿದರೆ ಇಂತಹ ಕಳಪೆ ಬೀಜ ಮಾರಾಟ ಮಾಡುವುದು ಗೊತ್ತಾಗುತ್ತದೆ.

      ಜನರಿಗೆ ಅನ್ನ ಹಾಕುವ ರೈತರಿಗೆ ಮೋಸ ಮಾಡುವವರ ವಿರುದ್ಧದ ಕಠಿಣ ಕ್ರಮಗಳನ್ನು ತೆಗೆದುಕೊಂಡು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರವಹಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಉ.ಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ಕಾಳಿ. ಮುಖಂಡರಾದ ಚಂದ್ರಶೇಖರ ಉಪ್ಪಿನ.ಪರಮೇಶಪ್ಪ ಹಲಗೇರಿ. ಪರಮೇಶಪ್ಪ ಕಟ್ಟೇಕಾರ ಸೇರಿದಂತೆ ಅನೇಕರಿದ್ದರು.

Recent Articles

spot_img

Related Stories

Share via
Copy link