ರೈತ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ

ಹಾನಗಲ್ಲ

      ಫೇಬ್ರುವರಿ 8 ರಂದು ನಡೆಯಲಿರುವ ಕರ್ನಾಟಕ ಸರ್ಕಾರದ ಬಜೆಟ್ ಮಂಡನೆಯಲ್ಲಿ ತಾಲೂಕಿಗೆ ಸಂಭಧಪಟ್ಟ ನೀರಾವರಿ ಯೋಜನೆಗಳನ್ನು ಬಜೆಟ್‍ನಲ್ಲಿ ಸೇರಿಸುವಂತೆ ಒತ್ತಾಯಿಸಿ ಹಾನಗಲ್ಲ ತಾಲೂಕ ಹಸೀರು ಸೇನೆ ರೈತ ಸಂಘಟನೆ ವತಿಯಿಂದ ಗುರುವಾರ ತಹಶೀಲ್ದಾರ ಎಸ್.ಎಮ್.ಯತ್ನಳ್ಳಿಯವರ ಮುಖೇನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

     ಗುರುವಾರ ತಹಶೀಲ್ದಾರ ಕಚೇರಿಯಲ್ಲಿ ಸಲ್ಲಿಸಿದ ಮನವಿಯಲ್ಲಿ ಬ್ಯಾಡಗಿ ರೈತ ಸಂಘಟನೆಯಿಂದ ಅಣೂರ ಕೆರೆ ನೀರು ತುಂಬಿಸುವ ಯೋಜನೆ ಅನುಷ್ಟಾನಗಿಳಿಸಲು ಫೇ.6 ರಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತ ಸಂಘಟನೆಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದು, ತಾಲೂಕಿನ ಬಾಳಂಬೀಡ ಹಾಗೂ ಶಿರಗೋಡ ಏತ ನೀರಾವರಿ ಯೋಜನೆಗಳನ್ನು ಬಜೇಟ್‍ನಲ್ಲಿ ಸೇರ್ಪಡೆ ಮಾಡಬೇಕು.
ಸತತ ಮೂರು ವರ್ಷಗಳಿಂದ ಬೇಳೆವಿಮೆ ನೂನ್ಯತೆಗಳನ್ನು ಸರಿಪಡಿಸಿ ಕೂಡಲೆ ವಿಮೆ ಪರಿಹಾರವನ್ನು ಒದಗಿಸಬೇಕು.

       ಹಾವೇರಿ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಮಂಜೂರಾಗಿದ್ದರು ಇದು ವರೆಗೂ ಪ್ರಾರಂಭಗೊಂಡಿಲ್ಲ ಕೂಡಲೆ ಪ್ರಾರಂಭಿಸುವಂತೆ ಒತ್ತಾಯಿಸಿದರಲ್ಲದೆ ಮುಂಬರುವ ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ಜಿಲ್ಲಾದ್ಯಂತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆ ತಾಲೂಕ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಮನವಿಯಲ್ಲಿ ಒತ್ತಯಿಸಿದ್ದಾರೆ.

      ಈ ಸಂಧರ್ಭದಲ್ಲಿ ಜಿಲ್ಲಾ ಹಸೀರು ಸೇನೆ ರೈತ ಸಂಘಟನೆ ಉಪಾಧ್ಯಕ್ಷ ಅಡಿವೇಪ್ಪ ಆಲದಕಟ್ಟಿ, ಮಾಲತೇಶ ಪರಪ್ಪನವರ, ಗದಿಗೇಯ್ಯಸ್ವಾಮಿ ಹಿರೇಮಠ, ಶ್ರೀಕಾಂತ ದುಂಡಣ್ಣನವರ, ರಾಜೀವ್ ದಾನಪ್ಪನವರ, ಸೊಮಣ್ಣ ಜಡೆಗೊಂಡರ, ಅಬ್ದುಲ್ ಖಾದರ್ ಮುಲ್ಲಾ, ಅಶೋಕ ಅಡಕಿಹಾಳ, ಅಜ್ಜನಗೌಡ ಪಾಟೀಲ, ಮಲ್ಲನಗೌಡ ಸಿ ಪಾಟೀಲ, ಮೇಲಾರಪ್ಪ ಬಡೆಮ್ಮನವರ, ಜಗದೀಶ ಭಂಗಿ, ರಾಘವೇಂದ್ರ ಹುನಗುಂದ ಮುಂತಾದವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link