ಚಳ್ಳಕೆರೆ
ಇಲ್ಲಿನ ನಗರಸಭೆಯಲ್ಲಿ ಪೌರಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮಿಪುತ್ರ(45) ಕಾರ್ಯನಿರ್ವಹಿಸು ವಾಗಲೇ ಹೃದಯಘಾತದಿಂದ ಮೃತಪಟ್ಟು ಮೂರು ತಿಂಗಳು ಕಳೆದಿದ್ದು, ಅವನ ಪತ್ನಿಗೆ ನಗರಸಭೆ ಕಚೇರಿಯಲ್ಲೇ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಇಲ್ಲಿನ ಪೌರನೌಕರರು ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.
ಅವರು ಶುಕ್ರವಾರ ಮಧ್ಯಾಹ್ನ ಪೌರಾಯುಕ್ತ ಪಿ.ಪಾಲಯ್ಯನವರಿಗೆ ಮನವಿ ಮಾಡಿ, ಲಕ್ಷ್ಮಿಪುತ್ರ ಮೃತಪಟ್ಟು 3 ತಿಂಗಳು ಕಳೆದಿದ್ದು, ಮನೆಯಲ್ಲಿ ಸಂಸಾರ ನಿರ್ವಹಿಸಲು ತೊಂದರೆಯಾಗಿದ್ದು, ಈ ಬಗ್ಗೆ ಕೂಡಲೇ ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಪ್ರಭಾರ ಪೌರಾಯುಕ್ತ ಪಿ.ಪಾಲಯ್ಯ, ನೌಕರರ ಮನವಿಯನ್ನು ಆಲಿಸಿ ಲಕ್ಷ್ಮಿಪುತ್ರನ ಕುಟುಂಬಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಈಗಾಗಲೇ ಪೌರಾಡಳಿತ ಇಲಾಖೆ ನಿರ್ದೇಶಕರಿಗೆ ತುರ್ತು ಪತ್ರವನ್ನು ಕಳುಹಿಸಿದ್ದು, ಕೂಡಲೇ ಅನುಮತಿ ನೀಡುವಂತೆ ವಿನಂತಿಸಲಾಗಿದೆ. ಪ್ರಸ್ತುತ ಪತ್ರ ಹಿರಿಯ ಅಧಿಕಾರಿಗಳ ಗಮನದಲ್ಲಿದ್ದು, ಅವರಿಂದ ಆದೇಶ ಬಂದಕೂಡಲೇ ಅವಕಾಶ ಮಾಡಿಕೊಡುವ ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ