ಮದ್ಯದಂಗಡಿ ತೆರವಿಗಾಗಿ ಜಿಲ್ಲಾಧಿಕಾರಿಗೆ ಮನವಿ

ಹಾನಗಲ್ಲ :

    ಎಂಎಸ್‍ಐಎಲ್ ಸ್ವಾಮ್ಯದ ಮದ್ಯದ ಅಂಗಡಿ ತೆರಯದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ಹಾಗೂ ಮಹಿಳಾ ಸ್ವ ಸಹಾಯ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಧರ್ಭದಲ್ಲಿ ಸ್ಥಳ ಪರಿಶೀಲನೆಗೆ ಆಗಮಿಸಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ ಘಟನೆ ಹಾನಗಲ್ ತಾಲೂಕ ಹೇರೂರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

    ತಾಲೂಕಿನ ಹೇರೂರ ಗ್ರಾಮದಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ವರ್ಗದ ಜನರೂ ಹೆಚ್ಚಿದ್ದಾರೆ. ದುಡಿದ ಹಣವನ್ನೆಲ್ಲ ಮದ್ಯದ ಅಂಗಡಿಗೆ ಸುರಿಯುವಂತಾಗುತ್ತದೆ ಇದರಿಂದ ಕೌಟುಂಬಿಕ ಕಲಹಗಳು ಹೆಚ್ಚಾಗುವ ಸಾದ್ಯತೆವಾಗುವುದಷ್ಟೆ ಅಲ್ಲದೆ ಪಕ್ಕದಲ್ಲಿ ಗುಬ್ಬಿ ನಂಜುಂಡೇಶ್ವರ ಮಠ , ಹಾಗೂ ಅಯ್ಯಪ್ಪ ಸ್ವಾಮಿ ಸನ್ನಿದಿ, ರೇಣುಕಾ ದೇವಿ ದೇವಸ್ಥಾನಕ್ಕೆ ಇಗಾಗಲೆ ಅಡಿಗಲ್ಲು ಹಾಕಲಾಗಿದೆ. ಅಷ್ಟೆ ಅಲ್ಲದೆ ಮದ್ಯದಂಗಡಿಯಿಂದ ಗ್ರಾಮದ ನೆಮ್ಮದಿ ಜೊತೆಗೆ ಯುವಕರು ಹಾಳಾಗುವ ಸಾದ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗೆ ಸ್ಥಳದಲ್ಲಿದ್ದ ಮಹಿಳೆಯರು ಮನವಿ ಮಾಡಿದರು.

      ಈ ಹಿಂದೆ ಎಷ್ಟೋ ಸಾರಿ ಗ್ರಾಮದಲ್ಲಿ ಮದ್ಯದಂಗಡಿ ಬೇಡವೆಂದು ಮನವಿ ಸಹ ಸಲ್ಲಿಸಲಾಗಿತ್ತು ಮನವಿ ಸಲ್ಲಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಗಮನಕ್ಕೆ ತಂದರು. ಒಂದು ವೇಳೆ ಮನವಿ ಲೆಕ್ಕಿಸದಿದ್ದರೆ ಹಾವೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಹಿಳೆಯರು ಮತ್ತು ಮಕ್ಕಳೊಂದಿಗೆ ಅನಿರ್ಧಿಷ್ಟ ಅವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ರೈತ ಸಂಘದ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ರಾಜ್ಯ ಸಂಚಾಲಕ ಮಾಲತೇಶ ಪೂಜಾರ ಎಚ್ಚರಿಸಿದರು.

     ಇದೆ ಸಂಧರ್ಭದಲ್ಲಿ ಸ್ಥಳ ಪರಿಶೀಲನೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಆಗಮಿಸಿದ್ದ ಸಂದರ್ಭದಲ್ಲಿ ಮದ್ಯದ ಅಂಗಡಿ ತೆರೆಯಲು ಪರವಾನಿಗೆ ನೀಡದಂತೆ ಕೋರಲಾಯಿತು. ಹೇರೂರು ಗ್ರಾಮ ಘಟಕದ ಅಧ್ಯಕ್ಷ ಬಸವರಾಜ್ ಹತ್ತಿಯವರ, ಗ್ರಾಮಸ್ಥರಾದ ರಮೇಶ ಹಾದಿಮನಿ, ಗಿರಿಮಲ್ಲಪ್ಪ ಬಾಗಣ್ಣನವರ, ಗಿರಿಜವ್ವ ಹರಿಜನ, ನಾಗವ್ವ ಹರಿಜನ, ಲಕ್ಷ್ಮವ್ವ ಹರಿಜನ, ನೀಲವ್ವ ಹರಿಜನ, ರೇಣುಕಾ ತಲವಾರ, ನೀಲಮ್ಮ ಹಾದಿಮನಿ, ಕಮಲವ್ವ ಸುರಳೇಶ್ವರ, ಅಕ್ಕಮ್ಮ ಸುರಳೇಶ್ವರ, ಜಬೀನಾ ನದಾಫ್, ಹಿರಾಂಬಿ ನದಾಫ್, ಫಾತಿಮಾ ನದಾಫ್, ರಜಿಯಾ ನದಾಫ್, ಅನಸವ್ವ ಕಾಶಂಬಿ, ಗೌರಮ್ಮ ಬ್ಯಾಡಗಿ, ಬೀರಪ್ಪ ಸುರಳೇಶ್ವರ, ಫಕ್ಕೀರಪ್ಪ ಹರಿಜನ, ಮಹದೇವಪ್ಪ ಹರಿಜನ, ಶಿವಾನಂದಪ್ಪ ಹರಿಜನ, ಮಾರುತಿ ಹರಿಜನ, ಮಾಲತೇಶ ಹರಿಜನ, ಹನುಮಂತಪ್ಪ ಹರಿಜನ, ಬಸವರಾಜ್ ವೆಂಕಟಾಪೂರ, ಗುಂಡನಗೌಡ ಪಾಟೀಲ, ಜಗದೀಶ್ ಗುಳಪಣ್ಣನವರ, ಮಲ್ಲನಗೌಡ ಹಂಚಿನಮನಿ, ಶಿವನಗೌಡ ಪಾಟೀಲ, ಯಲ್ಲಪ್ಪ ಬಾಗಣ್ಣನವರ, ರಾಮಣ್ಣ ಬಾಗಣ್ಣನವರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link