ಶಿಕ್ಷಕರ ವಿವಿದ ಬೇಡಿಕೆಗಳ ಈಡೇರಿಕೆ ಫೆ.16ಕ್ಕೆ ಬೃಹತ್ ಪ್ರತಿಭಟನೆ 

0
14

ಬಳ್ಳಾರಿ 

       ಪ್ರಾಥಮಿಕ ಶಾಲಾ ಶಿಕ್ಷಕರ ವಿವಿದ ಬೇಡಿಕೆ ಗಳಾದ ಹಳೆ ಪಿಂಚಣಿ ವ್ಯವಸ್ಥೆ ಮತ್ತು ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟನೆ ಯನ್ನು ನಾರಾಯಣ್ ರಾವ್ ಪಾರ್ಕ್ ನಿಂದ ರಾಯಲ್ ಸರ್ಕಲ್ ಮುಖಾಂತರ ಜಿಲ್ಲಾಧಿಕಾರಿ ಕಛೇರಿಯ ವರೆಗೆ ಬೃಹತ್ ಮೆರವಣಿಗೆ ಮೂಲಕ ಇದೆ ಫೆಬ್ರವರಿ 16 ರಂದು ಡಿಸಿ ಕಛೇರಿ ಮುಂಭಾಗದಲ್ಲಿ ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮಾನ್ಯ ಮುಖ್ಯಮಂತ್ರಿ ಗೆ ಮನವಿ ಪತ್ರ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಸಿ ನಿಂಗಪ್ಪ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

       ನಗರದ ಡಿಸಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಪದವಿದರ ಶಿಕ್ಷಕರ 52 ಸಾವಿರ ಇದ್ದು, ಅದರಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಮೂರು ಸಾವಿರ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇವರಿಗೆ ಬಡ್ತಿ ವಿಷಯದಲ್ಲಿ ಸಿ ಆಂಡ್ ಆರ್ ಪರೀಕ್ಷೆ ಯನ್ನು ಕೈಬಿಟ್ಟು ಸೇವಾ ಜೆಷ್ಠತಾ ಆಧಾರದ ಮೇಲೆ ಬಡ್ತಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

       ಹಳೆ ಪಿಂಚಣಿ ವ್ಯವಸ್ಥೆ ರದ್ದು ಪಡಿಸಲು ಸಮೀತಿ ರಚನೆ ಮಾಡಿದ್ದು ಈ ಸಮೀತಿ ಏನೇ ವರದಿ ನೀಡಿದರೂ ಕೂಡ ಯತವತ್ತಾಗಿ ಜಾರಿಗೆ ತರಬೇಕು ಮತ್ತು ಗ್ರಾಮೀಣ ಕೃಪಾಂಕ ಆದಾರದ ಮೇಲೆ ಆಯ್ಕೆ ಯಾಗಿ 2003 ರಲ್ಲಿ ಆದೇಶ ನೀಡಿತು, ಮುಂಬಡ್ತಿ ನೀಡುವಾಗ ಇಂಕ್ರಿಮೆಂಟ್ ಹಾಗೂ ವೇತನ ತಾರತಮ್ಯ ಸರಿಪಡಿಸಬೇಕೆಂದು ಆಗ್ರಹಿಸಿದರು, ನಂತರ ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾಗಿದ್ದರು, ಅದು 2015 ಕ್ಕೆ ಮುಕ್ತಾಯ ವಾಗಿರುತ್ತದೆ ಈ ಶಿಕ್ಷಕರನ್ನು ನಾನ್ ಪ್ಲಾನ್

       ಶಿಕ್ಷಕರೆಂದು ಪರಿಗಣಿಸಿ ಮುಂದುವರಿಸುವದರ ಜೊತೆಗೆ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ ವನ್ನು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದ ಕಾರ್ಯಕ್ರಮ ದಲ್ಲಿ ವಿಲೀನಗೊಳಿಸಬಾರದು,ಎಂದು ಆಕ್ರೋಶ ವ್ಯಕ್ತಪಡಿಸಿದರು. ಇವುಗಳನ್ನು ತ್ವರಿತವಾಗಿ ಸಮ್ಮಿಶ್ರ ಸರ್ಕಾರ ಶಿಕ್ಷಕರ ಬೇಡಿಕೆಗಳು ಶೀಘ್ರದಲ್ಲೇ ತೀರ್ಮಾನ ತೆಗೆದುಕೊಂಡು ಸರಿಪಡಿಸದಿದ್ದರೆ ಮುಂದುವರಿದ ಭಾಗವಾಗಿ ಬೃಹತ್ ವಿಧಾನ ಸೌಧ ಚಲೋ ಹಮ್ಮಿಕೊಳ್ಳಲಾಗುತ್ತದೆ.ಹಾಗೂ ಎಚ್ಚರಿಕೆಯ ಸಂದೇಶಗಳನ್ನು ಸರ್ಕಾರಕ್ಕೆ ಹುಟ್ಟುವಂತೆ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು
ಈ ಒಂದು ಪತ್ರಿಕಾ ಗೋಷ್ಠಿಯಲ್ಲಿ ವಿ ಬಿ ಜಗದೀಶ್, ಉಪಾಧ್ಯಕ್ಷರು ಪ್ರಭು ಗೌಡ, ಕವಿತಾ,ನಂದಿಶ್ವರ್ ನಾಯಕ್, ಶಿವಶಂಕರ್, ಇನ್ನೂ ಮುಂತಾದ ಶಿಕ್ಷಕ ಬಳಗವು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here