ಮುಖ್ಯಶಿಕ್ಷಕರನ್ನು ಮುಂದುವರಿಸಲು ಮನವಿ

ಹಾವೇರಿ :

          ತಾಲೂಕಿನ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ ನೀಲಗಂಪಿ ಅವರನ್ನು ಮುಂದುವರಿಸುವಂತೆ ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಬೈಸಿಕಲ್‍ಗಳನ್ನು ನೀಡುವಂತೆ ಒತ್ತಾಯಿಸಿ ಕರ್ಜಗಿ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶಾಲೆಯು ಸತತವಾಗಿ ಉತ್ತಮ ಫಲಿತಾಂಶ ನೀಡತ್ತಿದ್ದು, ಅನಾವಶ್ಯಕವಾಗಿ ಸ್ಥಳೀಯ ಕೇಲವು ಜನಪ್ರತಿನಿಧಿಗಳು ಶೈಕ್ಷಣಿಕ ವಿಷಯದಲ್ಲಿ ಹಸ್ತ ಕ್ಷೇಪ ಮಾಡವುದರಿಂದ ಶೈಕ್ಷಣಿಕವಾಗಿ ದುಸ್ಪರಿಣಾಮ ಬೀರುತ್ತಿದೆ.

         ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಸಮಾಜದೊಂದಿಗೆ ಹೊಂದಾಣಿಕೆಯಿಂದ ಉತ್ತಮ ಬಾಂದವ್ಯ ಹೊಂದಿದ್ದಾರೆ. ಆದರೆ ಶಿಕ್ಷಕ ಗಣೇಶ ನೀಲಗಂಪಿ ಅವರನ್ನು ಅನಾವಶ್ಯಕವಾಗಿ ರಾಜಕೀಯ ಮಾಡಿ ಮುಖ್ಯ ಶಿಕ್ಷಕ ಹುದ್ದೆಯಿಂದ ತಪ್ಪಿಸಿದ್ದು, ಈ ಶಾಲೆಗೆ ಬೇರೆಯವರನ್ನು ವಾರದಲ್ಲಿ 3 ದಿನ ಪ್ರಭಾರಿ ಮುಖ್ಯ ಶಿಕ್ಷಕರನ್ನಾಗಿ ನೇಮಿಸಲಾಗಿದೆ. ಇದರಲ್ಲಿ ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ಬೆಳೆ ಬೇಯಿಸಿಕೊಳ್ಳುವ ಹುನ್ನಾರ ಅಡಗಿದೆ ಆದರೆ ಗ್ರಾಮದ ಎಲ್ಲರ ಅಭಿಪ್ರಾಯಕ್ಕೆ ವಿರುದ್ಧವಾಗಿರುವುದರಿಂದ ಈ ಆದೇಶವನ್ನು ರದ್ದು ಮಾಡಿ ಗಣೇಶ ನೀಲಗಂಪಿ ಅವರನ್ನು ಮುಂದುವರಿಸಬೇಕು. ರಾಜಕೀಯ ವ್ಯಕ್ತಿಗಳು ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡದಂತೆ ತಡೆಗಟ್ಟಬೇಕು.

          ಶಾಲೆಗೆ ಅವಶ್ಯಕವಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ಜಗಿ ಗ್ರಾಪಂ ಅಧ್ಯಕ್ಷರಾದ ಪುಷ್ಪ ಸುಣಗಾರ.ಉಪಾಧ್ಯಕ್ಷರಾದ ಶೇಖಪ್ಪ ಒಡ್ಡರ.ತಾಪಂ ಸದಸ್ಯ ಈರಣ ಕುಲಕರ್ಣಿ. ಗ್ರಾಪಂ ಸದಸ್ಯರಾದ ಶಂಕರಗೌಡ ಕುಲಕರ್ಣಿ.ಗಂಗಣ್ಣ ಶಿರೂರ.ಪರಶುರಾಮ ಚವ್ಹಾಣ.ಬಸವರಾಜ ಪೂಜಾರ.ಹಸೀನಾ ರಾಮಾಪೂರ.ಶಕೀರಾಬಾನು ಕಿತ್ತೂರ.ರಫೀಕ ಇಮಕನವರ. ವಕೀಲರಾದ ನಾರಾಯಣ ಕಾಳೆ ಸೇರಿದಂತೆ ಅನೇಕರು ಇದ್ದರು. ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಬೈಸಿಕಲ್‍ಗಳನ್ನು ನೀಡುವಂತೆ ಒತ್ತಾಯಿಸಿ ಕರ್ಜಗಿ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

          ಶಾಲೆಯು ಸತತವಾಗಿ ಉತ್ತಮ ಫಲಿತಾಂಶ ನೀಡತ್ತಿದ್ದು, ಅನಾವಶ್ಯಕವಾಗಿ ಸ್ಥಳೀಯ ಕೇಲವು ಜನಪ್ರತಿನಿಧಿಗಳು ಶೈಕ್ಷಣಿಕ ವಿಷಯದಲ್ಲಿ ಹಸ್ತ ಕ್ಷೇಪ ಮಾಡವುದರಿಂದ ಶೈಕ್ಷಣಿಕವಾಗಿ ದುಸ್ಪರಿಣಾಮ ಬೀರುತ್ತಿದೆ. ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಸಮಾಜದೊಂದಿಗೆ ಹೊಂದಾಣಿಕೆಯಿಂದ ಉತ್ತಮ ಬಾಂದವ್ಯ ಹೊಂದಿದ್ದಾರೆ. ಆದರೆ ಶಿಕ್ಷಕ ಗಣೇಶ ನೀಲಗಂಪಿ ಅವರನ್ನು ಅನಾವಶ್ಯಕವಾಗಿ ರಾಜಕೀಯ ಮಾಡಿ ಮುಖ್ಯ ಶಿಕ್ಷಕ ಹುದ್ದೆಯಿಂದ ತಪ್ಪಿಸಿದ್ದು, ಈ ಶಾಲೆಗೆ ಬೇರೆಯವರನ್ನು ವಾರದಲ್ಲಿ 3 ದಿನ ಪ್ರಭಾರಿ ಮುಖ್ಯ ಶಿಕ್ಷಕರನ್ನಾಗಿ ನೇಮಿಸಲಾಗಿದೆ. ಇದರಲ್ಲಿ ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ಬೆಳೆ ಬೇಯಿಸಿಕೊಳ್ಳುವ ಹುನ್ನಾರ ಅಡಗಿದೆ ಆದರೆ ಗ್ರಾಮದ ಎಲ್ಲರ ಅಭಿಪ್ರಾಯಕ್ಕೆ ವಿರುದ್ಧವಾಗಿರುವುದರಿಂದ ಈ ಆದೇಶವನ್ನು ರದ್ದು ಮಾಡಿ ಗಣೇಶ ನೀಲಗಂಪಿ ಅವರನ್ನು ಮುಂದುವರಿಸಬೇಕು.

         ರಾಜಕೀಯ ವ್ಯಕ್ತಿಗಳು ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡದಂತೆ ತಡೆಗಟ್ಟಬೇಕು. ಶಾಲೆಗೆ ಅವಶ್ಯಕವಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ಜಗಿ ಗ್ರಾಪಂ ಅಧ್ಯಕ್ಷರಾದ ಪುಷ್ಪ ಸುಣಗಾರ.ಉಪಾಧ್ಯಕ್ಷರಾದ ಶೇಖಪ್ಪ ಒಡ್ಡರ.ತಾಪಂ ಸದಸ್ಯ ಈರಣ ಕುಲಕರ್ಣಿ. ಗ್ರಾಪಂ ಸದಸ್ಯರಾದ ಶಂಕರಗೌಡ ಕುಲಕರ್ಣಿ.ಗಂಗಣ್ಣ ಶಿರೂರ.ಪರಶುರಾಮ ಚವ್ಹಾಣ.ಬಸವರಾಜ ಪೂಜಾರ.ಹಸೀನಾ ರಾಮಾಪೂರ.ಶಕೀರಾಬಾನು ಕಿತ್ತೂರ.ರಫೀಕ ಇಮಕನವರ. ವಕೀಲರಾದ ನಾರಾಯಣ ಕಾಳೆ ಸೇರಿದಂತೆ ಅನೇಕರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link