ಶುಶ್ರುಷಕಿಯರನ್ನು ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಮನವಿ

ಪಾವಗಡ

     ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಹೆಚ್‍ಸಿ ಮತ್ತು ಸಿಹೆಚ್‍ಸಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರುಷಕಿಯರನ್ನು ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಶುಕ್ರವಾರ ತಹಶೀಲ್ದರ್ ಟಿ.ಎಸ್.ಕುಂಬಾರ್‍ರವರಿಗೆ ಶುಷ್ರುಕಿಯರು ಮನವಿ ಪತ್ರ ಸಲ್ಲಿಸಿದರು.

     ಮನವಿ ಪತ್ರ ಸಲ್ಲಿಸಿ ಶುಶ್ರುಷಕಿ ಜ್ಯೋತಿ ನಾಯಕ ರವರು ಮಾತನಾಡಿ ಕಳೆದಾ ಎರಡು ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾ 40 ಜನ ಶುಶ್ರುಷಕಿಯರನ್ನು ಯಾವುದೇ ಮಾಹಿತಿ ನೀಡದೇ ಕೇಲಸದಿಂದ ತೆಗೆದು ಹಾಕಲಾಗಿದ್ದು , ಇದೇ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದಾ ಹಲವು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಎಂದು ಆವೇದನೆ ವ್ಯೆಕ್ತಪಡಿಸಿದರು.

      ರಾಜ್ಯದ ಯಾವುದೇ ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾ ಶುಶ್ರುಷಕಿಯರನ್ನು ಸೇವೆಯಿಂದ ತೆರವುಗೊಳಿಸಿಲ್ಲ ನಮ್ಮ ತಾಲ್ಲೂಕಿನಲ್ಲೇ ಇಂತಹ ಕ್ರಮ ಕೈಗೊಂಡಿದ್ದಾರೆ , ಇಷ್ಟು ತಿಂಗಳು ಕೇಲಸ ಮಾಡದರೂ ಇಂದು ತಿಂಗಳು ಕೂಡ ಸಕಾಲದಸಲ್ಲಿ ವೇತನ ಪಾವತಿಸಿಲ್ಲ ಇನ್ಮೂಂದೆ ಸಕಾಲದಲ್ಲಿ ಪಾವತಿಸಬೇಕು , ವೇತನದಲ್ಲಿ ಖಡಿತವಾಗುವ ಪಿಎಪ್ ಮತ್ತು ಇಜಿಐಎಸ್ ಮಾಹಿತಿ ಕಾರ್ಡ್ ನೀಡಿ , ಸೇರಿದಂತೆ ನಮ್ಮನ್ನು ನಮ್ಮ ಕೇಲಸದಲ್ಲಿ ಮುಂದುವರೆಸಬೇಕೆಂದು ಒತ್ತಾಯಿಸಿದರು.

       ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾದಿಕಾರಿಗಳಾದ ರಾಮಾಂಜಿನಪ್ಪರವರಿಗೂ ಮನವಿ ಪತ್ರ ಸಲ್ಲಿಸಿ ಸೇವೆಯಲ್ಲಿ ಮುಂದುವರೆಸುವಂತೆ ಮನವಿ ಮಾಡಿರುತ್ತಾರೆ.ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಶೀಲ್ದರ್ ಟಿ.ಎಸ್.ಕುಂಬಾರ್‍ರವರು ಸಂಬಂದಪಟ್ಟ ಅದಿಕಾರಿಗಳಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗುವುದೆಂದರು.ಈ ಸಂದರ್ಭದಲ್ಲಿ ಶುಶ್ರುಷಕಿಯರಾದ ಶ್ರೀದೇವಿ , ಚಂದ್ರಕಳ ,ಶೋಭನ , ಲಲಿತಮ್ಮ , ನಾಗಮಣಿ , ನೇತ್ರವತಿ , ಮಮತ , ಶ್ರುತಿ , ವೀಣಾ , ಶಿಲ್ಪ , ರಾಧಮ್ಮ , ಅನಿತ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ