ಅಂಗನವಾಡಿ ಕಾರ್ಯಕರ್ತೆಯರಿಗೆ ಕಿರುಕುಳ : ಸಿಡಿಪಿಓ ವಜಾಕ್ಕೆ ಆಗ್ರಹ

ಬಳ್ಳಾರಿ:
 
     ನೂರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಸೇರಿದ್ದು ಇವರನ್ನುದ್ದೇಶಿಸಿ ಮಾತನಾಡಿದ ಅಂಗವಾಡಿ ಫೆಡರೇಷನ್ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪನವರು ಮಾತನಾಡಿ ಸಿಡಿಪಿಓ ಜಲಾಲಪ್ಪನವರ ಮೇಲೆ ಕ್ರಮ ತೆಗೆದುಕೊಳ್ಳಲು ಮತ್ತು ವಿಚಾರಣೆಗೆ ಆದೇಶಿಸುವ ಕುರಿತು ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳವುದಾಗಿ ಭರವಸೆ ನೀಡಿದರು.
    ತಿಂಗಳಿಗೊಮ್ಮೆ ಜಿಲ್ಲಾ ಪಂಚಾಯತ್ ಡಿ.ಎಸ್.-2 ಇವರ ಮುಂದಾಳತ್ವದಲ್ಲಿ ಶಿಶು ಅಭಿವೃದ್ಧಿ ಯೋಜನೆಯ ಸಮಗ್ರ  ಜಾರಿ ಕುರಿತಾದ ಕುಂದುಕೊರತೆಗಳ ಸಭೆ ನಡೆಸಬೇಕೆಂದು ನಿರ್ದೇಶನ ಇದ್ದಾಗಲೂ ಈ ಕುರಿತು ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
    ಅಂಗನವಾಡಿ ಫೆಡರೇಷನ್ ಜಿಲ್ಲಾಧ್ಯಕ್ಷರಾದ  ಕಾಂ|| ಇಸ್ಮಾಯಿಲ್ ಮಾತನಾಡಿ ವಿಕೃತ ಮನಸ್ಸಿನ ವ್ಯಕ್ತಿಯಾದ ಜಲಾಲಪ್ಪನವರು ಮಹಿಳೆಯರೇ ತುಂಬಿರುವ ಈ ಇಲಾಖೆಯಲ್ಲಿ ಉದ್ಯೋಗ ಮಾಡಲು ಅರ್ಹರಲ್ಲ. ಆದ್ದರಿಂದ ಇಂತಹ ಅಧಿಕಾರಿಯನ್ನು ತೆಗೆದು ಹಾಕುವ ತನಕ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.
   ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಘದ ಮುಖ್ಯಸ್ಥರಾದ ಆರ್ಕಾಣಿ, ಈ.ಮಂಗಮ್ಮ, ಶಿವಗಂಗಮ್ಮ, ರೇಣುಕಾ ಪಾಟೀಲ ಸಿರುಗುಪ್ಪ, ಫಾತೀಮಾ ಹೊಸಪೇಟೆ, ಧರ್ಮದೇವತಿ ಕೆ.ಜಿ.ಮಠ (ಕೆ.ಎಸ್.ಆರ್.ಟಿ.ಸಿ. ಯೂನಿಯನ್) ಇಸ್ಮಾಯಿಲ್ ಇನ್ನಿತರರು ಮಾತನಾಡಿದರು.
 
   ಸಿ.ಇ.ಓ ರಜೆ ಇಉವ ಕಾರಣ ಡಿ.ಎಸ್-2 ಉಮೇಶನಾಯ್ಕ ಇವರು ಮನವಿ ಸ್ವೀಕರಿಸುತ್ತಾ ನಿಮ್ಮ ದೂರಿನ ಕುರಿತು ಸಿ.ಇ.ಓ.ರವರು ಬಂದ ನಂತರ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದೇರೀತಿ ಕುಂದುಕೊರತೆಗಳ ಸಭೆ ನಡೆಸುವ ಜವಾಬ್ದಾಇ ನನ್ನದೇ ಇರುವ ಕಾರಣ ಈ ಕುರಿತು ಕೂಡಲೇ ದಿನಾಂಕ ನಿಗದಿಪಡಿಸಿ ನಿಮ್ಮಗಳಿಗೆ ಮಾಹಿತಿ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link