ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯ

ಚನ್ನಗಿರಿ:

      ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರು, ಅಡಕೆ ಬೆಳೆಗಾರರು, ದಿಗ್ಗೇನಹಳ್ಳಿ, ಮಲ್ಲಿಗೆರೆ ಮತ್ತು ಲಕ್ಷ್ಮೀಸಾಗರ ಗ್ರಾಮಸ್ಥರು ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಎಪಿಎಂಸಿ ನಿರ್ದೇಶಕ ದಿಗ್ಗೇನಹಳ್ಳಿ ಟಿ.ಎನ್.ನಾಗರಾಜ್ ಮಾತನಾಡಿ, ತಾಲೂಕಿನಲ್ಲಿ 29 ಸಾವಿರ ಹೆಕ್ಟೇರ್‍ನಲ್ಲಿ ಅಡಕೆ ತೋಟ ಇದೆ. ಈ ಬಾರಿ ಮಳೆ ಕಡಿಮೆಯಾಗಿ ನೀರಿನ ಸಮಸ್ಯೆ ಎದುರಾಗಿದೆ. ಅಡಕೆ ಮರ ಉಳಿಸಿಕೊಳ್ಳಲು ಪರದಾಡುವಂತಾಗಿದೆ ಎಂದರು.

     ಬೆಸ್ಕಾಂನವರು ನಿಗದಿತದಂತೆ ಕರೆಂಟ್ ನೀಡುತ್ತಿಲ್ಲ. ಜತೆಗೆ ವೋಲ್ಟೇಜ್ ಕಡಿಮೆ ನೀಡಲಾಗುತ್ತಿದೆ. ಇದರಿಂದ ತೋಟ ಒಣಗುತ್ತಿದೆ . ಅನೇಕ ಬಾರಿ ಇಲಾಖೆಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೆಸ್ಕಾಂ ಇಲಾಖೆ ಎಇಇ ನಾಗರಾಜ್ ಸ್ಥಳಕ್ಕೆ ಆಗಮಿಸಿ, ವಿದ್ಯುತ್ ಸಮಸ್ಯೆ ಇರಲ್ಲ. ಲೋಡ್ ಶೆಡ್ಡಿಂಗ್ ವೇಳೆ ಕರೆಂಟ್ ಹೋಗಿರುತ್ತದೆ. ಮತ್ತು ವೋಲ್ಟೇಜ್ ಸರಿ ಪಡಿಸುವುದಾಗಿ ಭರವಸೆ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link