ಚಿತ್ರದುರ್ಗ
ಕೃಷಿ ಚಟುವಟಿಕೆಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಬಳ್ಳಿಗಟ್ಟೆ ರೈತರು ನಗರದ ಬೆಸ್ಕಾಂ ಗ್ರಾಮೀಣ ವಿಭಾಗ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಬಳ್ಳಿಗಟ್ಟೆ ಮಾರ್ಗದಲ್ಲಿ ಪೂರೈಕೆಯಾಗುವ ವಿದ್ಯುತ್ ವೋಲ್ಟೇಜ್ ಪ್ರಮಾಣ ಕಡಿಮೆ ಇರುವುದರಿಂದ ಕೃಷಿ ಚಟುವಟಿಕೆಗೆ ಸಮಸ್ಯೆ ಆಗಿದೆ. ವೊಲ್ಟೆಜ್ ಏರಿಳಿತದಿಂದ ಪದೇ ಪದೆ ಪಂಪ್‍ಸೆಟ್‍ಗಳಿಗೆ ಹಾನಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಮೇಶ್‍ಗೆ ಮನವಿ ಸಲ್ಲಿಸಿದರು.
ಮುಖಂಡರಾದ ಬಸ್ತಿಹಳ್ಳಿ ಸುರೇಶ್ ಬಾಬು, ಧನಂಜಯ, ತಿಮ್ಮಣ್ಣ, ಬಳ್ಳಿಗಟ್ಟೆಯ ಆರ್.ರಾಜಣ್ಣ, ಬಿ.ಎನ್.ಪ್ರಭುದೇವ, ಮಧು, ಟಿ.ಚನ್ನೇಶ, ಮಂಜಪ್ಪ, ಸೋಮಶೇಖಕರ, ಎಚ್.ಮುರಿಗೇಂದ್ರಪ್ಪ, ಬಸವರಾಜಪ್ಪ, ನಿಜಲಿಂಗಪ್ಪ, ಶಿವಮೂರ್ತಿ, ರುದ್ರಪ್ಪ,ವಿಜಯಪ್ಪ, ಬಿ.ಎಂ.ನಾಗರಾಜ್, ಕೆ.ಪರಮಶಿವಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ