ಮೀಸಲಾತಿ : ಸುಪ್ರೀಂ ಆದೇಶ ಜಾರಿಗೆ ಒತ್ತಾಯ

ಶಿರಾ

      ಪ.ಜಾತಿ ಮತ್ತು ಸಮುದಾಯದಲ್ಲಿ ಮಾದಿಗರು(ಎಡಗೈ) ಮತ್ತು ಛಲವಾದಿ(ಬಲಗೈ)ಜಾತಿಗಳನ್ನು ಮಾತ್ರ ಪ.ಜಾತಿ ಮೀಸಲಾತಿ ಅಡಿಯಲ್ಲಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಶಿರಾ ತಾಲ್ಲೂಕು ಅಂಬೇಡ್ಕರ್ ಯುವಸೇನೆಯು ತಹಸೀಲ್ದಾರ್ ಮೂಲಕ ಮಂಗಳವಾರ ಸರ್ಕಾರಕ್ಕೆ ಮನವಿ ಪತ್ರ ನೀಡಿತು.

     ಸುಮಾರು 3,000 ವರ್ಷಗಳ ಇತಿಹಾಸ ಹೊಂದಿರುವ ಮಾದಿಗ ಮತ್ತು ಛಲವಾದಿ ಸಮುದಾಯಗಳನ್ನು ಈ ಹಿಂದಿನಿಂದಲೂ ಅಸ್ಪøಶ್ಯರಂತೆಯೇ ಗುರ್ತಿಸಲಾಗುತ್ತಿದೆ. ಪರಿಶಿಷ್ಟ ಜಾತಿಗೆ ಸೇರ್ಪಡೆಗೊಂಡ ಬೇರೆ ಯಾವ ಸಮುದಾಯಗಳೂ ಅಸ್ಪøಶ್ಯರಾಗಿಲ್ಲ. ಸ್ಪರ್ಶ ಜಾತಿಗಳಾದ ಬೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳನ್ನು ಪರಿಶಿಷ್ಟ ಜಾತಿ ಮೀಸಲಾತಿಯಿಂದ ಕೈಬಿಡಬೇಕು ಎಂದು ತಾಲ್ಲೂಕು ಅಧ್ಯಕ್ಷ ಎನ್.ಕುಮಾರ್ ತಮ್ಮ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

     ಬಿಎಸ್‍ಪಿ ರಾಜ್ಯ ಮುಖಂಡ ಜೆ.ಎನ್.ರಾಜಸಿಂಹ, ತಾ.ಪ್ರ. ಕಾರ್ಯದರ್ಶಿ ಕಳ್ಳಂಬೆಳ್ಳ ಪಾಲಾಕ್ಷಯ್ಯ, ನಗರ ಅಧ್ಯಕ್ಷ ಮಲ್ಲಿಕಾಪುರ ಮಂಜು, ದಲಿತ ಮುಖಂಡರಾದ ನರಸಿಂಹಮೂರ್ತಿ, ಚೆನ್ನಪ್ಪ, ರಾಜಣ್ಣ, ಪರಮೇಶ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap