ದಾವಣಗೆರೆ:
ಕರ್ನಾಟಕ ರಾಜ್ಯ ಆರ್.ಟಿ.ಇ. ಖಾಸಗಿ ಅನುದಾನ ರಹಿತ ಶಾಲೆಗಳ ಮತ್ತು ವಿದ್ಯಾರ್ಥಿ ಪೋಷಕರ ದಾವಣಗೆರೆ ಜಿಲ್ಲಾ ಸಂಘದ ವತಿಯಿಂದ ಶನಿವಾರ ದಾವಣಗೆರೆ ಡಿಡಿಪಿಐ ಮುಖಾಂತರ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಆರ್.ಟಿ.ಇ. ಅಡಿ ಖಾಸಗಿ ಶಾಲೆಯಲ್ಲಿ ಪ್ರವೇಶ ನೀಡಲು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಇದೇ ತಿಂಗಳು 20 ರಂದು ಶಿಕ್ಷಣ ಇಲಾಖೆ ಆರ್.ಟಿ.ಇ. ಅಡಿಯಲ್ಲಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಿದ್ದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇದ್ದಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅವಕಾಶ ನೀಡಿರುವುದಿಲ್ಲ. ಆದ ಪ್ರಯುಕ್ತ ರಾಜ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಬಡ ಕುಟುಂಬದ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ವಂಚಿತರಾಗುತ್ತಿದ್ದಾರೆ. ಆದ ಪ್ರಯುಕ್ತ ಈ ಕೂಡಲೆ ಆರ್.ಟಿ.ಇ. ಕಾಯಿದೆ ತಿದ್ದುಪಡಿಯನ್ನು ರದ್ದುಪಡಿಸಿ ಈ ಹಿಂದಿನಂತೆ ಖಾಸಗಿ ಶಾಲೆಯಲ್ಲಿ ಓದಲು ಪ್ರವೇಶ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಆಗ್ರಹಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಣಬೇರು ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ. ಬಸವರಾಜಪ್ಪ, ಪದಾಧಿಕಾರಿಗಳಾದ ಜೆ. ಸುಧಾ, ವಿ. ಜ್ಯೋತಿ, ಲೀಲಾವತಿ, ಎಂ. ಜಿಯಾವುಲ್ಲಾ, ಪಿ. ಧರ್ಮರಾಜ್, ಗೋವಿಂದ್‍ರಾಜ್, ಬಿ.ಆರ್. ಶ್ರೀನಿವಾಸ್, ಬಿ. ಮನೋಜ್‍ಕುಮಾರ್, ಡಿ. ಮಹೇಶ್ವರಪ್ಪ, ರಾಜಶೇಖರ್, ಕೈದಾಳ್ ಕುಮಾರ್, ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








