ಹಾವೇರಿ :
ಜಿಲ್ಲೆಯಲ್ಲಿ ಪ್ರಮುಖವಾಗಿ ಗೋವಿನ ಜೋಳವನ್ನು ಬೆಳೆಯುತ್ತಿದ್ದು, ಒಂದು ಲಕ್ಷ ನಾಲ್ವತ್ತೈದು ಸಾವಿರ ಹೆಕ್ಟೇರ ಪ್ರದೇಶದಲ್ಲಿ ಗೋವಿನ ಜೋಳದ ಬೆಳೆ ಕಟಾವು ಆಗಿದ್ದು, ಈಗ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‍ಗೆ ರೂ. 1300/- ರಿಂದ 1350/- ಗಳಿಗೆ ಖರೀದಿ ಮಾಡುತ್ತಿದ್ದು, ಇದು ರೈತರಿಗೆ ಅನ್ಯಾಯವಾಗುತ್ತದೆ.
ಸರಕಾರ ಪ್ರತಿ ತಾಲೂಕಿನಲ್ಲಿ ಗೋವಿನ ಜೋಳ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಗಿಹಳ್ಳಿ ಹೇಳಿದರು . ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ರೈತರ ಹಿತ ಕಾಯುವ ಕೆಲಸ ಮಾಡದೇ ಅವಮಾನಿಸುವುದನ್ನು ನಿಲ್ಲಿಸಿಬೇಕು. ಸತತ ಬರಗಾಲದಿಂದ ರೈತ ಸಮುದಾಯ ಕೆಂಗಟ್ಟು ಹೋಗಿದೆ ಕೊಡಲೇ ರೈತರ ನೆರವಿಗೆ ಬರಬೇಕು ಎಂದರು.
ರಾಜ ಪ್ರಧಾನ ಕಾರ್ಯದರ್ಶಿ ರಾಜಶೇಖರ ಕ ದೂದಿಹಳ್ಳಿ ಮಾತನಾಡಿ ಖಾಸಗಿ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳು ಜಪ್ತಿ ನೋಟಿಸುಗಳನ್ನು ಮತ್ತು ಅರೆಸ್ಟ ವಾರೆಂಟಗಳನ್ನು ಹಿಡಿದುಕೊಂಡು ಮನೆಗೆ ಬರುತ್ತಿದ್ದಾರೆ. ಇದರಿಂದ ಕಂಗಾಲಾದ ರೈತ ಕುಟುಂಬಗಳು ಸರಣಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅದಕ್ಕೆ ತಾವುಗಳು ರೈತರ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲಗಳು ಮನ್ನಾ ಆಗಿರುತ್ತವೆ ಅನ್ನುವುದನ್ನು ಲಿಖಿತ ರೂಪದಲ್ಲಿ ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ಅನೇಕ ಸಮಸ್ಯೆಗಳ ಬಗ್ಗೆ ಇಂದು (ದಿ.22) ಹುಬ್ಬಳ್ಳಿಯಲ್ಲಿ ಇರುವ ಶಿದ್ದಾರೂಢ ಮಠದಿಂದ ಬೃಹತ್ ಮಟ್ಟದ ಪ್ರತಿಭಟಣೆ ಹಮ್ಮಿಕೊಂಡಿದ್ದು ಈ ಪ್ರತಿಭಟಣೆಯು ಕಿತ್ತೂರ ಚನ್ನಮ್ಮ ಸರ್ಕಲ್‍ವರೆಗೂ ಬಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಫಕ್ಕಿರಗೌಡ್ರ ಗಾಜಿಗೌಡ್ರ. ಜಗದೀಶ ಕೂಸಗೂರ.ರೇಣುಕುಸ್ವಾಮಿ ಹಿರೇಮಠ ಹೊನ್ನಪ್ಪ ಸಣ್ಣಬಾರ್ಕಿ. ರಾಮನಗೌಡ ಹ ತರ್ಲಘಟ್ಟ ಸನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ