ಪಾವಗಡ
ಬುಧವಾರ ಕಾರ್ಮಿಕ ವರ್ಗವು ದೇಶವ್ಯಾಪಿ ಹಮ್ಮಿಕೊಂಡಿದ್ದ ಸಾರ್ವತ್ರಿಕ ಮುಷ್ಕರದ ಅಂಗವಾಗಿ ತಾಲ್ಲೂಕಿನ ವಿವಿಧ ಕಾರ್ಮಿಕ ಸಂಘಟನೆಗಳು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ದ ತಮ್ಮ ಆಕ್ರೋಶ ಹೊರಹಾಕಿದವು.
ಮುತ್ತಿಗೆಯಲ್ಲಿ ಎ.ಐ.ಟಿ.ಯು.ಸಿ. ಮುಖಂಡ ಟಿ.ಎಸ್. ರಾಮಕೃಷ್ಣ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಶಾಸನಬದ್ದ ಭವಿಷ್ಯನಿಧಿ ಮತ್ತು ಪಿಂಚಣಿ ಹಾಗೂ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ರೈತ ಮತ್ತು ಹಸಿರುಸೇನೆ ತಾ. ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಾಗಿ ಡಾ. ಸ್ವಾಮಿನಾಥನ್ ವರದಿಜಾರಿಗೊಳಿಸಬೇಕು. ಸಾಲಮನ್ನಾ ಹಾಗೂ ರೈತರ ಆತ್ಮಹತ್ಯೆ ತಡೆಗಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಬಲಗೊಳಿಸಬೇಕು. ಪಾವಗಡ ತಾಲ್ಲೂಕಿಗೆ ಶೀಘ್ರ ಭದ್ರಾಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ತಾ. ಸಿ.ಐ.ಟಿಯು. ಅಧ್ಯಕ್ಷೆ ಸುಶೀಲಮ್ಮ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ 21 ಸಾವಿರ ರೂ. ಕನಿಷ್ಠ ವೇತನ ಜಾರಿಗೊಳಿಸÀಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆಯಾಗಬೇಕು. ಮಾಸಿಕ ಪಿಂಚಣಿ ಕನಿಷ್ಠ 10 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದರು.
ಬಸ್ ಸ್ಟ್ಯಾಂಡ್ ಹಮಾಲಿ ಸಂಘದ ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ, ಪಟ್ಟಣದ ಎ.ಪಿ.ಎಂ.ಸಿ. ಹಾಗೂ ಬಸ್ಸ್ಟ್ಯಾಂಡ್ ಹಮಾಲಿಗಳಿಗಾಗಿ ವಸತಿ ಸೌಕರ್ಯ ಕಲ್ಪಿಸಲು ಸರ್ವೇ ನಂ 178 ರಲ್ಲಿ 4 ಎಕರೆ ಜಮೀನನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಪಾವಗಡ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಬಸ್ಗಳ ಓಡಾಟ ಇತ್ತು. ಅಂಗಡಿ ಮುಂಗಟ್ಟುಗಳು, ಬ್ಯಾಂಕುಗಳು ಎಂದಿನಂತೆ ತೆರೆದಿದ್ದವು.
.
ಅಂಗನವಾಡಿ ರಮೀಜಾ, ಹೊಸಹಳ್ಳಿ ರತ್ನಮ್ಮ, ಶಿವಗಂಗಮ್ಮ, ಅಲುವೇಲಮ್ಮ, ಹಮಾಲಿ ಸಂಘದ ಅಧ್ಯಕ್ಷ ಸುಬ್ಬರಾಯಪ್ಪ, ಉಪಾಧ್ಯಕ್ಷ ರಾಮಾಂಜಿನಪ್ಪ, ಕಾರ್ಯದರ್ಶಿ ಮದಲೇಟಪ್ಪ, ರೈತ ಸಂಘದ ಮುಖಂಡರಾದ ಗಂಗಾಧರ್, ಜಿ.ಎಚ್. ರಾಮಾಂಜಿ ನಪ್ಪ, ವಿ.ಕೃಷ್ಣರಾವ್, ಆಂಜನೇಯಲು, ಅಕ್ಷರ ದಾಸೋಹ ನೌಕರ ಸಂಘದ ಜಿಲ್ಲಾ ಮುಖಂಡರಾದ ಕೆಂಚಮ್ಮ, ಸಿದ್ದಮ್ಮ, ನಾಗರತ್ನ, ಸುವರ್ಣ, ಎ.ಐ.ಟಿ.ಯು.ಸಿ. ಮುಖಂಡರಾದ ನಾಗರತ್ನಪ್ಪ, ಎನ್. ಅಂಜಿನಪ್ಪ, ಗಿರಿಸ್ವಾಮಿ, ಮತ್ತು ಅಂಗನವಾಡಿ ನೌಕರರು ಹಾಜರಿದ್ದರು.ಗ್ರೇಡ್- 2 ತಹಶೀಲ್ದಾರ್ ಸತ್ಯನಾರಾಯಣರಾವ್ ಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಗೂ ಮುನ್ನಾ ಪಾವಗಡದ ಎ.ಪಿ.ಎಂ.ಸಿ. ಮಾರುಕಟ್ಟೆಯಿಂದ ತºಸೀಲ್ದಾರ್ ಕಚೇರಿಯವರೆಗೂ ಮೆರವಣಿಗೆ ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
