ಹುಳಿಯಾರು
ಆರ್‍ಡಬ್ಲ್ಯೂಎಸ್ ಇಲಾಖೆಯ ಬೇಜವಾಬ್ದಾರಿಯಿಂದ ಸುಡು ಬಿಸಿಲೆನ್ನದೆ ಹಂದನಕೆರೆಯಲ್ಲಿ ಜನರು ನೀರಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
15 ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಬಗ್ಗೆ ತಾಲ್ಲೂಕು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮತ್ತು ಹಂದನಕೆರೆ ಪಿಡಿಓ ಅವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ. ಪರಿಣಾಮ ಭೀಮ್ಸಂದ್ರ, ಕಾನ್ಕೆರೆ, ಕೆಂಗಲಾಪುರ, ಕೆಂಗಲಾಪುರ ಹಟ್ಟಿ, ದೊಡ್ಡ ಹಟ್ಟಿ ಮತ್ತು ಕೆಂಗಲಾಪುರದ ಪಾಳ್ಯದ ಜನ ಕುಡಿಯುವ ನೀರಿಗಾಗಿ ಸುಮಾರು 6 ಕಿಮೀ ದೂರ ಕ್ರಮಿಸಿ ಹಂದನಕೆರೆಯಲ್ಲಿ ಸುಡು ಬಿಸಿಲೆನ್ನದೆ ಜನಜಂಗುಳಿ ಮಧ್ಯೆ ಕಾದು ನೀರು ತರುವಂತಹ ಪರಿಸ್ಥಿತಿ ಇದೆ ಎಂದಿದ್ದಾರೆ.
ಇನ್ನಾದರೂ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿ ಮಾಡಿಸಿ ಹಂದನಕೆರೆ ಕುಡಿಯುವ ನೀರಿನ ಘಟಕದ ಮುಂದೆ ಜನಜಾತ್ರೆ ಸೇರುವುದನ್ನು ತಪ್ಪಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ