ಚಿತ್ರದುರ್ಗ
ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಸಂಸದ ಎ.ನಾರಾಯಣಸ್ವಾಮಿಯವರನ್ನು ಬಿಟ್ಟುಕೊಳ್ಳದೆ ಅವಮಾನಿಸಿಸುವುದನ್ನು ಖಂಡಿಸಿ ಅಂಬೇಡ್ಕರ್ ಸೇನೆ(ರಿ.) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷಗಳಾದರೂ ಇನ್ನೂ ಇಂತಹ ಅಸ್ಪøಶ್ಯತೆ ಆಚರಣೆಗಳು ಜೀವಂತವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಪರಿಸ್ಥಿತಿ ಉಂಟಾಗಿದೆ. ಯಾವುದೇ ಒಂದು ಸಮುದಾಯ ಅಭಿವೃದ್ಧಿಯಾಗಬೇಕಾದರೆ ಆ ಸಮುದಾಯದ ಜನ ವಿದ್ಯಾವಂತರಾಗಬೇಕು. ಇದನ್ನು ಬಿಟ್ಟು ಯಾವುದೋ ಕಾಲದ ಸಂಪ್ರದಾಯಗಳಿಗೆ ಒಳಗಾಗಿ ಮನುಷ್ಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವುದು ಅದೆಷ್ಟು ಸರಿ.
ದೇಶದ ಸಂಸದರ ಪರಿಸ್ಥಿತಿ ಹೀಗಿದ್ದರೆ ಅಲ್ಲಿ ಬದುಕುತ್ತಿರುವ ದಲಿತರ ಗತಿಯೇನು ಎಂಬುದನ್ನು ಯೋಚಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಜಿಲ್ಲಾಧ್ಯಂತ ಹೋರಾಟಗಳನ್ನು ಹಮ್ಮಿಕೊಂಡು, ಜಿಲ್ಲೆಯ ದಲಿತ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ನಾವೇ ಖುದ್ದಾಗಿ ಗೊಲ್ಲರಹಟ್ಟಿ ಪ್ರವೇಶಿಸುತ್ತೇವೆಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷರಾದ ಮಂಜುನಾಥ್.ಎ ತಾಳಿಕೆರೆ ಮಾತನಾಡಿ, ಈ ತಾಲ್ಲೂಕಿನಲ್ಲಿ ಸುಮಾರು 100ಕ್ಕೂ ಹೆಚ್ಚು ಗೊಲ್ಲರಹಟ್ಟಿಗಳಿವೆ, ನಿಮ್ಮ ಸಂಪ್ರದಾಯ, ಜಾತ್ರೆ, ಪೂಜೆ, ಉತ್ಸವಗಳನ್ನು ಕೈಬಿಡಿ ಎಂದು ನಾವು ಹೇಳುವುದಿಲ್ಲ. ಆದರೆ ನೀವು ಮಾಡುತ್ತಿರುವ ಆಚರಣೆ ಸಂವಿಧಾನಕ್ಕೆ ಧಕ್ಕೆ ತರುವಂಥದಾಗಿದೆ. ಮುಂದಿನ ದಿನಗಳಲ್ಲಿ ನಾವೇ ಜಿಲ್ಲೆಯ ಎಲ್ಲಾ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಗೊಲ್ಲ ಸಮುದಾಯದ ಸಂಪ್ರದಾಯಗಳಿಗೆ ನಮ್ಮ ವಿರೋಧವಿಲ್ಲ. ಆದರೆ ನೀವು ಆಚರಿಸುವ ಮೂಢನಂಬಿಕೆಗಳನ್ನು ಮಾತ್ರ ನಿಲ್ಲಿಸಿ ಎಂದು ಕೇಳಿಕೊಳ್ಳುತ್ತೇವೆ. ಇದರ ಬಗ್ಗೆ ಗೊಲ್ಲ ಸಮಾಜದ ಮುಖಂಡರು ಚರ್ಚಿಸಿ ಅವರ ಸಮುದಾಯಕ್ಕೆ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ್.ಟಿ, ಜಿಲ್ಲಾ ಕಾರ್ಯದರ್ಶಿ ಚಂದ್ರಪ್ಪ.ಎನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನಂತ್‍ಕುಮಾರ್, ಜಿಲ್ಲಾ ಖಜಾಂಚಿ ಮಾರುತಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹಾಲೇಶ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಪುನಿತ್, ಸಹಕಾರ್ಯದರ್ಶಿ ಜಂಬುಲಿಂಗ, ತಾಲ್ಲೂಕು ಉಪಾಧ್ಯಕ್ಷ ಶರಣಪ್ಪ, ಪದಾಧಿಕಾರಿಗಳಾದ ಜಗದೀಶ್ ಕಲ್ಕುಂಟೆ, ಶಶಿ ಚೇಳುಗುಡ್ಡ, ಹರೀಶ್, ಬಾಬು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ