ಐತಿಹಾಸಿಕ ಕೋಟೆ ನೆಲಸಮಗೊಳಿಸಿದಿವರ ವಿರುದ್ಧ ಕ್ರಮಕ್ಕೆ ಒತ್ತಾಯ

ಹೊಸಪೇಟೆ:

       ಕಮಲಾಪುರ ಪಟ್ಟಣದ ಕಂಪ್ಲಿ ರಸ್ತೆಯಲ್ಲಿರುವ ಐತಿಹಾಸಿಕ ಕೋಟೆಯನ್ನು ನೆಲಸಮಮಾಡಿ ಆಜಾಗವನ್ನು ಅನದೀಕೃತ ಅತೀಕ್ರಮಣ ಮಾಡಲಾಗುತ್ತಿದೆ ಎಂದು ಆರೂಪಿಸಿ ಹಿಂದು ಜಾಗರಣ ವೇದಿಕೆ ಕಮಲಾಪುರ ಘಟಕದ ಪದಾಧಿಕಾರಿಗಳು ಸೋಮವಾರ ಹಂಪಿ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.

      ವಿಶ್ವ ವಿಖ್ಯಾತ ವಿಜಯನಗರ ಸಾಮ್ರಾಜ್ಯವು ಐತಿಹಾಸಿಕ ಸ್ಥಳವಾಗಿದೆ. ಇಲ್ಲಿ ಹಲವು ಸ್ಮಾರಕಗಳಿವೆ. ಈ ಪೈಕಿ ಕಮಲಾಪುರ ಪಟ್ಟಣದ ಕಂಪ್ಲಿ ರಸ್ತೆಯಲ್ಲಿರುವ ಕೋಟೆ ಸ್ಮಾರಕ ಧ್ವಂಸಗೊಳಿಸಲಾಗುತ್ತಿದೆ. ಇದೇ ಕೋಟೆ ಕೂಗಳತೆಯಲ್ಲಿ ಪೋಲೀಸ್ ಡಿ.ವೈ.ಎಸ್.ಪಿ. ಹಾಗೂ ಹೆಲಿಪ್ಯಾಡ್ ಹತ್ತಿರವಿರುವ ಪುರಾತನ ಕೋಟೆ ಸ್ಮಾರಕವಾಗಿದೆ. ಇಷ್ಟೇಲ್ಲ ಇದ್ದರೂ ಕೋಟೆ ಸ್ಮಾರಕವನ್ನು ನೆಲಸಮಗೊಳಿಸಲಾಗಿದೆ ಎಂದು ಮನವಿಯಲ್ಲಿ ದೂರಿದ್ದಾರೆ.

        ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಹಾಗೂ ಕೆಲ ರಾಜಕೀಯ ಮುಖಂಡರ ಕೈವಾಡದಿಂದ ಐತಿಹಾಸಿಕ ಕೋಟೆ ನೆಲಸಮಾಡಿ ಅತಿಕ್ರಮಣ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಕೋಟೆಯಿರುವ ಜಾಗವನ್ನು ಸರ್ವೆಮಾಡಿ ಇಲಾಖೆಗೆ ಸಂಬಂಧಪಟ್ಟ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕು. ಕೋಟೆ ನೆಲಸಮಗೊಳಿಸಿದಿವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ವೇದಿಕೆ ಪದಾಧಿಕಾರಿಗಳಾದ ಅಯ್ಯನಗೌಡ ಹೇರೂರು, ಮೌನೇಶ್ ಬಡಿಗೇರ್, ನವೀನ್ ಕುಮಾರ್ ಮುಂತಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link