ಹೊಸ ಸೇತುವೆಗೆ ಪ್ರಗತಿಪರರ ಒತ್ತಾಯ

ಕಂಪ್ಲಿ

      ನಗರದ ಕೋಟೆ ಬಳಿಯ ತುಂಗಾಭದ್ರಾ ನದಿಗೆ ಕಂಪ್ಲಿ-ಗಂಗಾವತಿ ಮಾರ್ಗ ಸಂಚಾರಕ್ಕೆ ನಿರ್ಮಿಸಿದ ಸೇತುವೆಯು ಸಂಪೂರ್ಣ ಶಿಥಿಲಗೊಂಡಿದ್ದು ಕೂಡಲೆ ಹೊಸ ಸೇತುವೆಯನ್ನು ನಿರ್ಮಾಣ ಮಾಡುವಲ್ಲಿ ಸರ್ಕಾರ ಮುಂದಾಗಬೇಕೆಂದು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮತ್ತು ಮಹಿಳಾ ಸಂಘಟನೆಗಳ ಮುಖಂಡರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಬ್ಯಾನರ್‍ನಲ್ಲಿ ಪ್ರತಿಭಟಿಸಿದರು.

       ಬುಧುವಾರ ನೂತನ ಸೇತುವೆ ನಿಮಾರ್ಣಕ್ಕಾಗಿ ಬೃಹತ್ ಪ್ರತಿಭಟನೆ ಅಮ್ಮಿಕೊಂಡು ಅಂಬೇಡ್ಕರ್ ವೃತ್ತದಿಂದ ಮುಖ್ಯ ರಸ್ತೆ ಮಾರ್ಗವಾಗಿ ಕೋಟೆ ಸೇತುವೆಯವರೆಗೆ ಸಾವಿರಾರು ಜನರಿಂದ ಕೂಡಿದ ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರಗತಿಪರರು ಮಾತನಾಡಿದರು.

      ಜಿ.ಜಿ.ಚಂದ್ರಣ್ಣ ಮಾತನಾಡುತ್ತಾ ಕಂಪ್ಲಿಯು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳ ಆರಂಭದ ಹೆಬ್ಬಾಗಿಲಾಗಿದ್ದು ಇಲ್ಲಿನ ತುಂಗಾಭದ್ರ ನದಿಗೆ 1961ರಲ್ಲಿ ನಿರ್ಮಿಸಿದ ಪ್ರಸ್ತುತ ಸೇತುವೆಯು ಸಂಪೂರ್ಣ ಶಿಥಿಲಗೊಂಡಿದೆ. ಅಲ್ಲದೆ ಈ ಸೇತುವೆ ರೈತರ ವ್ಯವಹಾರಕ್ಕೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೇರಿದಂತೆ ಅನಂತಪುರ ಮತ್ತು ಹೈದರಾಬಾದ್ ಬಾಗದ ಊರುಗಳಿಗೆ ಸಂಪರ್ಕ ಕಲ್ಪಿಸುವ ಅನುಕೂಲವಾದ ಸೇತುವೆಯಾಗಿತ್ತು.

     ಇಗಾಗಲೆ ಸೇತುವೆಯ ಆಯುಷ್ಯ ಕಳೆದಿದ್ದು ಯಾವ ಸಂದರ್ಭದಲ್ಲಾದರೂ ಅದು ಬೀಳಬಹುದು. ಸೇತುವೆ ಮೇಲೆ ದಿನೆ ದಿನೆ ವಾಹನಗಳ ಓಡಾಟ ಹೆಚ್ಚುತಿದ್ದು ಸೇತುವೆಯು ಅಪಾಯದಲ್ಲಿದೆ. ಆದುದರಿಂದ ಈ ಕೂಡಲೆ ಸರ್ಕಾರ ಗಮನ ಹರಿಸಿ ಹೊಸ ಸೇತುವೆ ನಿರ್ಮಾಣ ಮಾಡಬೇಕಿದೆ ಎಂದರು

        ದಲಿತ ಮುಖಂಡ ಮತ್ತು ಮಾಜಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಿ.ರಾಮಣ್ಣ ಮಾತನಾಡಿ ಕಂಪ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ನಡೆಸಿದ ಈ ಪ್ರತಿಭಟನೆಯ ಮನವಿಗೆ ಸರ್ಕಾರ ಶೀಘ್ರವಾಗಿ ಸ್ಪಂದಿಸಬೇಕು. ಅವಳಿ ಜಿಲ್ಲೆಗೆ ಆದಾರ ಸ್ಥಂಬ ಆಗಿರುವಂತ ಈ ಸೇತುವೆಯನ್ನು ಮರು ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಉಘ್ರ ಹೋರಾಟಕ್ಕಿಳಿಯಬೇಕಾಗುತ್ತದೆ. ಆದುದರಿಂದ ಕೊಪ್ಪಳ ಮತ್ತು ಬಳ್ಳಾರಿ ಮಾಜಿ-ಹಾಲಿ ಸಂಸದರು, ಶಾಸಕರು ಸೇರಿ ಸರ್ಕಾರದ ಮೇಲೆ ಒತ್ತಡ ತಂದು ನವ ಸೇತುವೆ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು ಎಂದರು.

      ಎ.ಸಿ.ದಾನಪ್ಪ ಮಾತನಾಡಿ ಯಾವುದೇ ಸರ್ಕಾರಗಳು ಬಂದರೂ ನಮ್ಮ ಕಂಪ್ಲಿ ನಗರಕ್ಕೆ ಮಲತಾಯಿ ಧೋರಣೆ ಮಾಡುತ್ತಾ ಬರುತ್ತಿವೆ. ಇಲ್ಲಿಯೆ ಆಗಬೇಕಿದ್ದ ಸೇತುವೆಯನ್ನು ಬುಕ್ಕಸಾಗರ ಮಾರ್ಗವಾಗಿ ಕಡೆಬಾಗಿಲು ಸೇತುವೆಯನ್ನು ನಿರ್ಮಾಣ ಮಾಡಿದ್ದು ಕಂಪ್ಲಿ ಜನತೆಗೆ ಮಾಡಿದ ಮೋಸ ಎಂದರು.

     ಸಣಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಮತ್ತು ರೈತ ಸೇವಾ ಸಹಕಾರ ಸಂಘದ ಉಪಾಧ್ಯಕ್ಷರಾದ ವಕೀಲ ಸಿ.ಯಂಕಪ್ಪ ಮಾತನಾಡಿ ಸೇತುವೆ ಬಗ್ಗೆ ಅಧಿಕಾರಿಗಳು ಅಸಡ್ಡೆ ವಹಿಸಿದ್ದರಿಂದ ಪ್ರಸ್ತುತ ಸೇತುವೆ ಶಿಥಿಲಗೊಂಡು ಸಾರ್ವಜನಿಕರನ್ನು ಆತಂಕಪಡುವಂತೆ ಮಾಡಿದೆ. ಈಗಲಾದರೂ ಸರ್ಕಾರ ಎಚ್ಚತ್ತುಕೊಂಡು ಕೂಡಲೆ ನೂತನ ಸೇತುವೆಯನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು.

      ಮಾಜಿ ಪುರಸಭೆ ಅಧ್ಯಕ್ಷ ಪಿ.ಬ್ರಹ್ಮಯ್ಯ ಮಾತನಾಡಿ ನೂತನ ಸೇತುವೆ ನಿರ್ಮಾಣ ಮಾಡಿದ್ದೇ ಆದರೆ ಸರ್ಕಾರಕ್ಕೆ ಕಂಪ್ಲಿ ಜನತೆ ಋಣಿಯಾಗಿರುತ್ತದೆ. ಶಾಲಾ-ಕಾಲೇಜುಗಳಿಗೆ ಹೋಗಿಬರುವ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ಕರೆಕಲ್ ಮನೊಹರ, ಬಿ.ಸಿದ್ದಪ್ಪ, ರಮೇಶ್, ಶ್ರೀಧರಶೆಟ್ಟಿ, ಲಿಂಗನಗೌಡ ಸೇರಿದಂತೆ ಅನೇಕರು ಮಾತನಾಡಿದರು.ಮನವಿಯನ್ನು ಮುಖ್ಯಮಂತಿಗಳಿಗೆ ತಹಶೀಲ್ದಾರ್‍ರಾದ ಎಂ.ರೇಣುಕ ಅವರ ಮೂಖಾಂತರ ಸಲ್ಲಿಸಿಲಾಯಿತು.

       ಪ್ರತಿಭಟನಾ ಮೆರವಣಿಗೆಯಲ್ಲಿ ಪುರಸಭಾಧ್ಯಕ್ಷ ಎಂ.ಸುಧೀರ್, ಪುರಸಭೆ ಸದಸ್ಯರಾದ ಹುಲುಗಪ್ಪ, ಸಪ್ಪರದ ರಾಘವೇಂದ್ರ, ವಾಲ್ಮಿಕಿ ರಘು, ಸುರೇಶ, ಪ್ರಮುಖರಾದ ಬಿ.ನಾಗೇಂದ್ರ, ಬಿ.ದೇವೆಂದ್ರ, ವೆಂಕಟರಮಣ, ಕೆ.ವಿರುಪಾಕ್ಷಿ, ಬೆಳಗೋೀಡ್ ರುದ್ರಪ್ಪ, ಅಯ್ಯೋದಿ ವೆಂಕಟೇಶ್, ಕೃಷ್ಣ ಪೌಳ್, ಎಸ್.ಎಸ್.ಎಂ.ಚೆನ್ನಯ್ಯಸ್ವಾಮಿ, ಜಿ.ಸುಧಾಕರ, ರಾಕೇಶ್ ಜೈನ್, ರಮೇಶ್ ಹೋಗಾರ್, ಅಕ್ಕಿ ಜಿಲಾನ್, ಪತ್ರಕರ್ತರ ಸಂಘದ ಜಿಲ್ಲಾ ಮುಖಂಡ ಭಾವೈಕ್ಯ ವೆಂಕಟೇಶ್, ವಸಂತರಾಜ ಕಹಳೆ, ಗಾಣಗೀರ್ ಶರಣ, ಕೆ.ಶಂಕ್ರಪ್ಪ, ಅಕ್ಕನ ಬಳಗದ ಪದಾಧಿಕಾರಿಗಳು, ಮುಕ್ಕುಂದಿ ರುದ್ರಾಣಿ ಮಹಿಳಾ ಸಂಘ, ಎಮ್ಮಿಗನೂರು ಮಹೇಶ್ ಗೌಡ, ಲಿಂಗನ ಗೌಡ ಅರವಿ ಬಸವನಗೌಡ, ನಿವೃತ್ತ ಶಿಕ್ಷಕರಾದ ರುದ್ರಮುನಿ, ಸೋಮಪ್ಪ ಸೇರಿಂದತೆ ಕಂಪ್ಲಿ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link