ಕೊಟ್ಟೂರೇಶ್ವರಸ್ವಾಮಿ ಜಾತ್ರೆ ಪ್ರಯುಕ್ತ ರಾತ್ರಿ ನಾಟಕ ಪ್ರದರ್ಶಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ

 ಕೊಟ್ಟೂರು

       ಕಳೆದ ಒಂದು ತಿಂಗಳಿನಿಂದ ಪಟ್ಟಣದ ಬೀಡು ಬಿಟ್ಟಿರುವ ನಾಟಕ ಕಂಪನಿಗಳ ರಾತ್ರಿ ಪ್ರದರ್ಶನಗಳನ್ನು ಚುನಾವಣೆ ನೀತಿ ಸಂಹಿತಿ ಹಿನ್ನಲೆಯಲ್ಲಿ ನಿರ್ಬಂಧಿಸಿದರುವ ಕ್ರಮವನ್ನ ಪರಾಮರ್ಶಿಸಿ ಮತ್ತೆ ಅವಕಾಶ ನೀಡುವಂತೆ ಹ.ಬೊ.ಹಳ್ಳಿ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಸ್ಥಳೀಯ ಶ್ರೀ ಕೊಟ್ಟೂರೇಶ್ವರ ಕಲಾರಂಗದವರರು ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.

      ಫೆ.28ರಿಂದ ಕೊಟ್ಟೂರು ಶ್ರೀ ಕೊಟ್ಟೂರೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಎರಡು ನಾಟಕ ಕಂಪನಿಗಳು ಪ್ರತಿ ಸಂಜೆ ಮತ್ತು ರಾತ್ರಿ ಪ್ರದರ್ಶನಗಳನ್ನು ನಡೆಸುತ್ತಿದ್ದವು. ಆದರೆ ಲೋಕಸಭೆ ಚುನಾವಣೆ ಘೋಷಣೆ ಹಿನ್ನಲೆಯಲ್ಲಿ ಜಾರಿಯಾದ ನೀತಿ ಸಂಹಿತೆಯಿಂದ ಮಾ.13ರಿಂದ ಕಂಪನಿಗಳ ರಾತ್ರಿ ಪ್ರದರ್ಶನ ನಡೆಸದಂತೆ ಸೂಚಿಸಿದೆ.

      ರಾಜ್ಯದ ಬೇರೆ ಜಾತ್ರೆ ಕ್ಯಾಂಪ್‍ಗಳಲ್ಲಿ ಯಾವುದೇ ನಿರ್ಬಂಧವಿಲ್ಲ. ಆದರೆ ಕೊಟ್ಟೂರಿನ ಕಂಪನಿಗಳಿಗೆ ಮಾತ್ರ ನಿರ್ಬಂಧ ಏಕೆ. ಈ ಕುರಿತು ಈಗಾಗಲೇ ಮಾ.14ರಂದು ರಾಜ್ಯ ಚುನಾವಣಾಧಿಕರಿಗಳು ನಾಟಕ ಪ್ರದರ್ಶನಗಳಿಗೆ ಯಾವುದೇ ಅಡ್ಡಿ ಇಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಈ ಕುರಿತು ಆದೇಶವನ್ನು ರವಾನಿಸಲವಾಗುವುದು ಎಂದು ತಿಳಿಸಿದ್ದರು.

      ಪ್ರತಿ ದಿನ ಒಂದೇ ಪ್ರದರ್ಶನದಿಂದ ಕಂಪನಿಗಳ ಆರ್ಥಿಕತೆಗೆ ಕತ್ತರಿ ಬಿದ್ದಿದೆ. ಆದ್ದರಿಂದ ರಾತ್ರಿ ಪ್ರದರ್ಶನಗಳಿಗೆ ಅವಕಾಶ ನೀಡಿ ನಾಟಕ ಕಂಪನಿಗಳಿಗೆ, ಕಲಾವಿದರ ನೋವಿಗೆ ಸ್ಪಂದಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮನವಿ ಸ್ವೀಕರಿಸಿದ ತಹಸೀಲ್ದಾರ ಅನಿಲ್ ಕುಮರ್ ಮಾತನಾಡಿ, ಕಲಾರಂಗದ ಮನವಿಯನ್ನು ಹ.ಬೊ.ಹಳ್ಳಿ ಸಹಾಯಕ ಚುನಾವಣಾಧಿಕಾರಿಗಳಿಗೆ ರವಾನಿಸುತ್ತೇನೆ. ಅಲ್ಲದೇ ರಾಜ್ಯ ಚುನಾವಣಾಧಿಕಾರಿಗಳ ಪತ್ರಿಕಾ ಹೇಳಿಕೆಯನ್ನು ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

         ರಾಜ್ಯ ನಾಟಕ ಅಕಾಡೆಮಿ ಸದಸ್ಯ ಜೀವರ್ಗಿ ರಾಜಣ್ಣ, ಕಲಾವಿದ ಭರತ್‍ರಾಜ್ ತಾಳೀಕೋಟೆ, ಕಲಾರಂಗದ ಶ್ರೀಕಾಂತ್ ಎನ್.ವಿ, ಎಂ.ಎಸ್.ಶಿವನಗುತ್ತಿ, ಮುಖೇಶ, ಬಿ.ಕೊಟ್ರೇಶ ಇತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link