ಚಿತ್ರದುರ್ಗ
ಬರಗಾಲದ ಹಿನ್ನಲೆಯಲ್ಲಿ ಜಾನುವಾರುಗಳ ರಕ್ಷಣೆಗಾಗಿ ಹುಣಸೇಕಟ್ಟೆ ಗ್ರಾಮದಲ್ಲಿ ಮೇವು ಬ್ಯಾಂಕ್ ತೆರೆಯಬೇಕೆಂದು ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ
ರೈತರಿಗೆ ಬರಗಾಲ ಬಂದಿರುವುದರಿಂದ ಜಾನುವಾರುಗಳಿಗೆ ಮೇವು ಇಲ್ಲದೆ ತುಂಬಾ ತೊಂದರೆಯಾಗಿರುತ್ತದೆ. ಈಗಾಗಲೇ ತುರುವನೂರಿನಲ್ಲಿ ಗೋಶಾಲೆ ತೆರೆದಿದ್ದು, ಅಲ್ಲಿಗೆ ನಮ್ಮ ಜಾನುವಾರಗಳನ್ನು ಹೋಗುವುದಕ್ಕೆ ಸುಮಾರು 8ಕಿ.ಮೀಗಳಿದ್ದು ಇದರಿಂದ ತೊಂದರೆಯಾಗುತ್ತದೆ.
ಹಾಗೂ ರೈತನ ಉಪಕಸಬಾದ ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದೇವೆ. ಗ್ರಾಮಗಳಲ್ಲಿ ಸುಮಾರು 3000 ಹಸುಗಳಿದ್ದು, ಇದರಿಂದ ರೈತರ ಜೀವನೋಪಾಯಕ್ಕೆ ಅನುಕೂಲವಾಗಿರುತ್ತದೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ ಹಾಗೂ ಹುಣಸೇಕಟ್ಟೆ ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದು, ಇದರಲ್ಲಿ ಮೇವು ಬ್ಯಾಂಕ್ ಮಾಡುವುದರ ಮುಖಾಂತರ ರೈತರ ಹಾಗೂ ಹಸುಗಳ ಸಂರಕ್ಷಣೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅನುಕೂಲವಾಗುತ್ತದೆ ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
