ಎಂ ಎನ್ ಕೋಟೆ
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯಲ್ಲಿ ಮಂಗಳವಾರ ರಾತ್ರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗಿದೆ. ಎಂ ಎನ್ ಕೋಟೆ ಸುತ್ತಮುತ್ತ ರಾತ್ರಿ ಭರ್ಜರಿ ಮಳೆಯಾಗಿ ರೈತರ ಹೊಲ ಗದ್ದೆಗಳಲ್ಲಿ ನೀರು ನಿಂತಿದೆ. ಹಾಗಲವಾಡಿ, ಮಂಚಲದೊರೆ, ಹೊಸಕೆರೆ, ಹೂವಿನಕಟ್ಟೆ, ಕೈಮರ ಗ್ರಾಮಗಳಲ್ಲಿ ಭರ್ಜರಿ ಮಳೆಯಾಗಿದೆ. ಎಂ ಎನ್ ಕೋಟೆ ಶ್ರೀ ಕೋಲ್ಲಾಪುರದಮ್ಮ ದೇವಾಲಯದ ಬಳಿ ಸೇತುವೆ ಜಲಾವೃತವಾಗಿದ್ದು ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಮಳೆ ಬಂದರೆ ಸೇತುವೆ ಮೇಲೆ ನೀರು ತುಂಬಿಕೊಳ್ಳುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ನೀರು ನಿಲ್ಲುವುದನ್ನು ಸರಿಪಡಿಸಿಬೇಕು ಎಂದು ಎಂಎನ್ ಕೋಟೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದ್ದು ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಹೊಲಗಳಲ್ಲಿ ರಾಗಿ ಬೆಳೆ ಉತ್ತಮವಾಗಿ ಹಚ್ಚ ಹಸಿರಿನಿಂದ ಕೂಡಿದೆ.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗಳಿಗೆ ನೀರು ಬಂದಿದೆ. ರೈತರ ಹೊಲ, ಗದ್ದೆ, ತೋಟಗಳಲ್ಲಿ ನೀರು ತುಂಬಿಕೊಂಡಿದೆ. ಈ ಭಾಗದಲ್ಲಿ ರಾಗಿಯನ್ನು ಬೆಳೆಯುವ ರೈತರೆ ಹೆಚ್ಚು ಇರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ