ಹಾವೇರಿ :
ಕ್ಷೌರಿಕ ವೃತ್ತಿ ಮಾಡುತ್ತಿದ್ದ ಹಡಪದ ಅಪ್ಪಣ್ಣ ಸಮುದಾಯದವರು ಕೋರೊನಾ ವೈರಸ್ ಹಾವಳಿಯಿಂದ ದೇಶವೇ ಲಾಕ್ ಡೌನ್ ಆಗಿದ್ದರಿಂದ ಪರಿಣಾಮವಾಗಿ ತೀರಾ ಆರ್ಥಿಕ ಪರಿಸ್ಥಿತಿ ಹದಿಗೆಟ್ಟು ಹೋಗಿದೆ ಸರ್ಕಾರ ಹಡಪದ ಸಮುದಾಯದವರಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಅವರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಸವಣೂರ ತಾಲ್ಲೂಕ ಘಟಕದ ವತಿಯಿಂದ ಡೊಂಬರಮತ್ತೂರ ಪಿಡಿಓ ಅವರ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡ ಸಂತೋಷ ಹಡಪದ ಮಾತನಾಡಿ ನಾವು ಕ್ಷೌರಿಕ ವೃತ್ತಿಯನ್ನೇ ಅವಲಂಬಿಸಿ ಬದುಕನ್ನು ನಡೆಸುತ್ತಿದ್ದೇವೆ. ಲಾಕ್ ಡೌನ್ ಆದರಿಂದ ಕೆಲಸಕ್ಕೆ ಹೋಗದೇ ಯಾವುದೇ ಆದಾಯವಿಲ್ಲವಾಗಿದೆ. ಕುಟುಂಬದ ಸದಸ್ಯ ಜೀವನ ನಿಭಾಯಿಸಲು ತುಂಬಾ ಕಷ್ಟ ಪಡುವಂತಾಗಿದೆ. ಅಂಗಡಿಗಳು ಮುಚ್ಚಿದ್ದರಿಂದ ತೊಂದರೆಯಾಗಿದೆ. ದಯಮಾಡಿ ನಮಗೆ ಸರ್ಕಾರ ನೆರವು ನೀಡಲು ಮುಂದಾಗಬೇಕಾಗಿದೆ. ಹಳ್ಳಿ ಹಾಗೂ ನಗರದಲ್ಲಿ ವಾಸಿಸುವ ನಮ್ಮ ಹಡಪದ ಅಪ್ಪಣ್ಣ ಸಮುದಾಯಕ್ಕೆ ಬದುಕಲು ನೆರವು ನೀಡಬೇಕೆಂದು ವಿನಂತಿ ಮೂಲಕ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ಗುಜನೂರ.ಕೋಟೆಪ್ಪ ಕಾಯಕದ.ವೀರಪ್ಪ ಹಡಪದ. ಮುದಕಪ್ಪ ಹಡಪದ. ನಿಂಗಪ್ಪ ಕಾಯಕದ. ಜಯಬಸಪ್ಪ ಎಚ್.ಉಮೇಶ ಎಚ್ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ