ಸರ್ಕಾರಿ ಜಮೀನನ್ನು ಬಡ ಜನರ ನಿವೇಶನ ಹಂಚಿಕೆಗೆ ಕಾಯ್ದಿರಿಸುವಂತೆ ಒತ್ತಾಯ

ಬಳ್ಳಾರಿ  

       ನಿವೇಶನ ರಹಿತ ಬಡ ಜನರಿಗೆ ನಿವೇಶನ ನೀಡಲು ಸರ್ಕಾರಿ ಜಮೀನನ್ನು ಕಾಯ್ದಿರಿಸಿ ಬಡ ಕುಟುಂಬಗಳಿಗೆ ಜಾಗಗಳನ್ನು ಖಾತ್ರಿಪಡಿಸಲು ಫಲಾನುಭವಿಗಳ ಪಟ್ಟಿ ತಯಾರಿಸುವಂತೆ ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ಬಳ್ಳಾರಿ ಜಿಲ್ಲಾ ಘಟಕ ಒತ್ತಾಯಿಸಿದೆ , ನಗರದ ಪ್ರಮುಖ ಬೀದಿಗಳಲ್ಲಿ ನಿವೇಶನ ರಹಿತ ಬಡ ಕುಟುಂಬಗಳು ಮೆರವಣಿಗೆಯ ಮೂಲಕ ಬೇಡಿಕೆ ಇಡೆರಿಸುವಂತೆ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿ ಮನವಿ ಪತ್ರವನ್ನು ಸಲ್ಲಿಸಿದರು ನಂತರ ಜಿಲ್ಲಾ ಸಂಚಾಲಕರಾದ ಎ,ಶಾಂತ ರವರು  ಮಾತಾನಾಡಿ ಬಳ್ಳಾರಿ ನಗರದ ಕೆಲವು ಬಡಾವಣೆಗಳ ನಾಗರೀಕರು ನಿವೇಶನ ಬೇಕೆಂದು ಸುಮಾರು 726 ಜನ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿರುವುದು

       ನಿಮಗೆ ತಿಳಿದ ವಿಷಯ ಈ ಬಡ ಕುಟುಂಬಗಳ ಸಂಖ್ಯೆಯನ್ನು ಪರಿಶೀಲಿಸಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕೂಡಲೇ ನಿವೇಶನ ಗಳನ್ನು ಖಾತ್ರಿಪಡಿಸಿ ಮಂಜೂರು ಮಾಡಬೇಕೆಂದು ಜಿಲ್ಲಾಧಿಕಾರಿ ಯನ್ನು ಮನವಿ ಮಾಡಿಕೊಂಡರು, ಹಾಗೆಯೇ ದಿನಾಂಕ 06-02-2018 ರಂದು ನಿವೇಶನ ಮುಂಜೂರಿಗಾಗಿ ಅರ್ಜಿಗಳನ್ನು ಸಲ್ಲಿಸಿದ ಎಲ್ಲಾ ಬಡಾವಣೆಯ ಫಲಾನುಭವಿಗಳ ಪಟ್ಟಿ ಮತ್ತು ಅರ್ಜಿದಾರರ ಪ್ರತಿಗಳನ್ನು ಎ,ಸಿ,ಮುಖಾಂತರ ತಮಗೆ ಸಲ್ಲಿಸಲಾಗಿತ್ತು,ಮತ್ತು ಸರ್ಕಾರದ ಆದೇಶ ಸಂಖ್ಯೆ ಮುಖಾಂತರ 8450/2018 ನೇ ಪ್ರತಿಯನ್ನು ಲಗತ್ತಿಸಿ ದಿನಾಂಕ12-09-2018 ರಂದು ತಮಗೆ ಮನವಿಪತ್ರ ಸಲ್ಲಿಸಿದ ಎಲ್ಲಾ ದಾಖಲೆಯನ್ನು ತಮಗೆ ನೀಡಿದೆ ಈಗಿರುವಾಗ ತಾವುಗಳು ಬಡ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಬಳ್ಳಾರಿಯ ನಿವೇಶನ ರಹಿತ ಕುಟುಂಬಗಳ ಮಹಿಳೆಯರು ಹಾಗೂ ಸಹ ಸಂಚಾಲಕ ಈ,ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link