ದಾವಣಗೆರೆ :
50 ಹಾಸಿಗೆಗಳ ಸಾಮಥ್ರ್ಯ ಇರುವ ನಗರದ ನಿಟ್ಟುವಳ್ಳಿಯಲ್ಲಿರುವ ಇ.ಎಸ್.ಐ. ಆಸ್ಪತ್ರೆಯನ್ನು 100 ಹಾಸಿಗೆಗಳ ಸಾಮಥ್ರ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಸಂತೋಷ್‍ಕುಮಾರ್ ಗಂಗವಾರ್ ಅವರನ್ನು ಭೇಟಿ ಮಾಡಿ ಸಂಸದ ಜಿ.ಎಂ.ಸಿದ್ದೇಶ್ವರ ಮನವಿ ಸಲ್ಲಿಸಿದ್ದಾರೆ.
ಈ ಆಸ್ಪತ್ರೆಯು ಕಳೆದ 28ರಿಂದ 30 ವರ್ಷಗಳಿಂದ ವಿಮೆ ಹೊಂದಿದ ಕಾರ್ಮಿಕರ ಆಶಾಕಿರಣವಾಗಿದೆ. 2012ರಲ್ಲಿ ಹಳೆ ಆಸ್ಪತ್ರೆಯನ್ನು ಕೆಡವಿ ಹೊಸ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ, ಹೊಸ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಆಸ್ಪತ್ರೆಯ ಸಾಮಥ್ರ್ಯವನ್ನು 100 ಹಾಸಿಗೆಗೆ ಏರಿಸುವ ಪ್ರಸ್ತಾವನೆ ಇತ್ತು. ಈ ಆಸ್ಪತ್ರೆಯು ಶಿವಮೊಗ್ಗ, ಬಳ್ಳಾರಿ, ಭದ್ರಾವತಿ, ಚಿತ್ರದುರ್ಗ, ಹರಿಹರ, ಸೇರಿದಂತೆ ಸಮೀಪದ ನಗರದ ರೋಗಿಗಳಿಗೆ ಅನುಕೂಲಕರವಾಗಿದೆ.
ಆದ್ದರಿಂದ ಈಗಿರುವ 50 ಹಾಸಿಗೆಗಳು ಸಾಲುತ್ತಿಲ್ಲ, ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯ ಸಾಮಥ್ರ್ಯವನ್ನು 50 ಹಾಸಿಗೆ ಸಾಮಥ್ರ್ಯದಿಂದ 100 ಹಾಸಿಗೆಗೆ ಏರಿಕೆ ಮಾಡಬೇಕಂದು ಸಂಸದರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
