ಬಳ್ಳಾರಿ
ಬಳ್ಳಾರಿ ಮಹಾನಗರ ಪಾಲಿಕೆಗೆ 220ಕೋಟಿ ರೂ.ಯುಜಿಡಿ ಅನುದಾನ ಒದಗಿಸುವಂತೆ ಕೋರಿ ನಗರಾಭಿವೃದ್ಧಿ ಸಚಿವರಿಗೆ ಸೋಮಶೇಖರ್ ರೆಡ್ಡಿ ಅವರು ಮನವಿ ಸಲ್ಲಿಸಿದರು.ಬೆಂಗಳೂರಿನಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕ ಸೋಮಶೇಖರ್ ರೆಡ್ಡಿ ಅವರು ಮಹಾನಗರ ಪಾಲಿಕೆಗೆ ಯುಜಿಡಿ ಅನುದಾನದಡಿಯಲ್ಲಿ ಅಂದಾಜು 220 ಕೋಟಿ ರುಪಾಯಿಗಳನ್ನು ಒದಗಿಸುವಂತೆ ಕೋರಿದರು.
ಶಾಸಕ ಸೋಮಶೇಖರ್ ರೆಡ್ಡಿ ಅವರ ಮನವಿಯನ್ನು ಆಲಿಸಿದ ಸಚಿವ ಭೈರತಿ ಅವರು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್,ರಾಯಚೂರು ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರ್ ರೆಡ್ಡಿ ಹಾಗೂ ಮುಖಂಡ ಶ್ರೀನಿವಾಸ್ ಮೋತ್ಕರ್ ಅವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ