ಕೆಪಿಸಿಸಿ : ಕೆಎನ್‍ಆರ್ ಪರ ಸಿದ್ದರಾಮಯ್ಯನವರಿಗೆ ಮನವಿ

ಮಧುಗಿರಿ:

    ಮಧುಗಿರಿ ತಾಲ್ಲೂಕಿನ ಅಭಿವೃದ್ಧಿ ಹರಿಕಾರರು ಮಾಜಿ ಶಾಸಕರಾದ ಕೆ.ಎನ್.ರಾಜಣ್ಣನವರನ್ನು ಕೆಪಿಸಿಸಿಯ ಅಧ್ಯಕ್ಷರನ್ನಾಗಿ ಮಾಡುವಂತೆ ಕೆಎನ್‍ಆರ್ ಯುವ ಬಿಗ್ರೇಡ್‍ನ ಪದಾಧಿಕಾರಿಗಳು ಜನಪ್ರಿಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಕಾವೇರಿ ವಸತಿ ಗೃಹದಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

    ಕೆಎನ್ ರಾಜಣ್ಣನವರು ಪಕ್ಷ ಸಂಘಟನೆಯನ್ನು ಮಾಡುವ ಸಮರ್ಥ ವ್ಯಕ್ತಿಯಾಗಿದ್ದಾರೆ. ರಾಜ್ಯದ ಹಿಂದುಳಿದ ಮತ್ತು ದೀನ ದಲಿತರ ಅಭಿವೃದ್ಧಿಯ ಜೊತೆಗೆ ತಳ ಮಟ್ಟದ ಕಾರ್ಯಕರ್ತರನ್ನು ಗುರುತಿಸುವಲ್ಲಿ ನಿಪುಣರು. ಯುವ ಉತ್ಸಾಹಿ ಯುವಕರನ್ನು ರಾಜ್ಯ ಮಟ್ಟದ ನಾಯಕರನ್ನಾಗಿ ಬೆಳೆಸುವಂತಹ ಶಕ್ತಿ ಅವರಿಗಿದೆ. ತಾಲ್ಲೂಕಿನಲ್ಲಿನ ಅಭಿವೃಧ್ಧಿ ಕಾರ್ಯಗಳು ರಾಜ್ಯದ ಮನೆ ಮಾತಾಗಿದೆ.

     ಅವರು ಅಧ್ಯಕ್ಷರಾದರೆ ಕಾಂಗ್ರೆಸ್ ಪಕ್ಷವು ಸದೃಢÀಗೊಳ್ಳುತ್ತದೆ. ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಪಡೆಯುವುದು ನಿಶ್ಚಿತ. ಆದ್ದರಿಂದ ಕೆಪಿಸಿಸಿಯ ಅಧ್ಯಕ್ಷ ಸ್ಥಾನಕ್ಕೆ ರಾಜಣ್ಣನವರ ಹೆಸರನ್ನು ಹೈಕಮಾಂಡ್ ಶಿಫಾರಸ್ಸು ಮಾಡಬೇಕೆಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

    ಬಿಗ್ರೇಡ್‍ನ ಸಂಸ್ಥಾಪಕ ಅಧ್ಯಕ್ಷ ನಟರಾಜ್ ಮೌರ್ಯ, ಮಂಜುನಾಥ್, ಮುಜಾಮಿಲ್, ಚೆಲುವರಾಜ್, ನಾಗರಾಜ್, ಚೇತನ್ ಮತ್ತಿತರರು ಇದ್ದರು.

 

Recent Articles

spot_img

Related Stories

Share via
Copy link
Powered by Social Snap