ಟಿಎಂಸಿಸಿಯಿಂದ ನಗರದಲ್ಲಿ ಮಿನಿ ಎಟಿಎಂ ಸೇವೆ

ತುಮಕೂರು

    ನಗರದ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟೀವ್ ಲಿಮಿಟೆಡ್ ಮುಂದಿನ ವಾರರದಿಂದ ನಗರದ ವಿವಿಧೆಡೆ ಮಿನಿ ಎಟಿಎಂ ಸೇವೆ ಆರಂಭ ಮಾಡುತ್ತಿದೆ. ಟಿಎಂಸಿಸಿಯ ಗ್ರಾಹಕರಲ್ಲದೆ ಇತರೆ ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್ ಹೊಂದಿರುವವರೂ ಈ ಮಿನಿ ಎಟಿಎಂ ಸೇವೆ ಪಡೆಯಬಹುದು ಎಂದು ಟಿಎಂಸಿಸಿ ಅಧ್ಯಕ್ಷ ಡಾ. ಎನ್ ಎಸ್ ಜಯಕುಮಾರ್ ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ಲಭ್ಯವಿರುವ ತಾಂತ್ರಿಕತೆ ಬಳಸಿಕೊಂಡು ಗ್ರಾಹಕರಿಗೆ ಹೆಚ್ಚು ಸೇವೆ ಒದಗಿಸುವುದು ಸಂಸ್ಥೆಯ ಉದ್ದೇಶ ಎಂದ ಅವರು, ಯಾವ ಬ್ಯಾಂಕುಗಳಲ್ಲೂ ಮಿನಿ ಎಟಿಎಂ ಸೇವೆ ಇಲ್ಲ, ಇದೇ ಮೊದಲ ಬಾರಿಗೆ ಟಿಎಂಸಿಸಿ ಈ ಸೇವೆ ನೀಡುತ್ತಿದೆ ಎಂದು ಹೇಳಿದರು.

   ತಮ್ಮ ಸಂಸ್ಥೆಯ ಶಾಖೆಗಳು ಸೇರಿದಂತೆ ನಗರದ ಬಸ್ ನಿಲ್ದಾಣ, ಪೆಟ್ರೋಲ್ ಬಂಕ್, ಸೇರಿದಂತೆ ವಿವಿಧ ವಾಣಿಜ್ಯ ಪ್ರದೇಶಗಳಲ್ಲಿ ಮೊದಲ ಹಂತವಾಗಿ 15 ಮಿನಿ ಎಟಿಎಂ ಸ್ಥಾಪನೆ ಮಾಡಲಾಗುತ್ತಿದೆ. ಸಣ್ಣ ಕ್ಯಾಬಿನ್, ಒಬ್ಬ ಸಿಬ್ಬಂದಿ, ಎಟಿಎಂ ಯಂತ್ರ ಹೊಂದಿರುವ ಮಿನಿ ಎಟಿಎಂನಲ್ಲಿ ಡೆಬಿಟ್ ಕಾರ್ಡ್ ಬಳಸಿ, ಆ ಸಿಬ್ಬಂದಿಯಿಂದ ಗ್ರಾಹಕರು ನಗದು ಹಣ ಒಡೆಯಬಹುದು. ಒಬ್ಬರು ಒಂದು ಬಾರಿಗೆ ಹತ್ತು ಸಾವಿರ ರೂ.ನಂತೆ ಒಂದು ದಿನಕ್ಕೆ 5 ಬಾರಿಯಂತೆ 50 ಸಾವಿರ ರೂ ಡ್ರಾ ಮಾಡಲು ಅವಕಾಶವಿದೆ ಎಂದು ಹೇಳಿದರು.

     ತಮ್ಮ ಎಲ್ಲಾ ಶಾಖೆಗಳಲ್ಲಿ ಹಾಗೂ ತುಮಕೂರು ನಗರದ ವಿವಿಧೆಡೆ ಜೊತೆಗೆ ಗ್ರಾಮೀಣ ಪ್ರದೇಶಗಳಿಗೂ ಮಿನಿ ಎಟಿಎಂ ಸೇವೆ ವಿಸ್ತರಿಸುವ ಉದ್ದೇಶವಿದೆ. ಹಾಲಿ ಇರುವ ಇತರೆ ಬ್ಯಾಂಕ್ ಎಟಿಎಂಗಳ ನಿರ್ವಹಣೆಗೆ ತಿಂಗಳಿಗೆ ಸುಮಾರು ಒಂದು ಲಕ್ಷ ರೂ.ವರೆಗೆ ಖರ್ಚು ಬರುತ್ತದೆ. ಆದರೆ, ಕಡಿಮೆ ನಿರ್ವಹಣೆಯಲ್ಲಿ ಮಿನಿ ಎಟಿಎಂನಿಂದ ಗ್ರಾಹಕರಿಗೆ ಸೇವೆ ಒದಗಿಸಬಹುದು ಎಂದು ಡಾ. ಎನ್ ಎಸ್ ಜಯಕುಮಾರ್ ಹೇಳಿದರು.

    ಈಗ ಬ್ಯಾಂಕಿಂಗ್ ಹಾಗೂ ಸಹಕಾರಿ ಕ್ಷೇತ್ರ ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಗ್ರಾಹಕರ ಹತ್ತಿರ ಬ್ಯಾಂಕ್ ಹೋಗಲು, ಅವರಿಗೆ ಉತ್ತಮ ಸೇವೆ ಒದಗಿಸಲು ತಾಂತ್ರಿಕಕತೆ ಅಳವಡಿಸಿಕೊಂಡಾಗ ಸಾಧ್ಯವಾಗುತ್ತದೆ, ಅದೇ ಹಿನ್ನೆಲೆಯಲ್ಲಿ ಟಿಎಂಸಿಸಿ ಹೆಜ್ಜೆ ಹಾಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಾ ಡಿಜಿಟಲ್ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿವೆ, ತಾಂತ್ರಿಕತೆ ಬಳಕೆಯಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap