ಹಾವೇರಿ :
ಶಹರದ ಜನರಿಗೆ ಕುಡಿಯುವ ನೀರನ್ನು ಒದಗಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಹಾವೇರಿ ಶಹರಕ್ಕೆ ಸುಮಾರು 2 ತಿಂಗಳ ಕಳೆದರೂ ಕುಡಿಯುವ ನೀರನ್ನು ಒದಗಿಸಲು ಜನಪ್ರತಿನಿದಿಗಳನ್ನು ಹಾಗೂ ಆಡಳಿತ ವರ್ಗ ವಿಫಲವಾಗಿದೆ.ಜನರು ನೀರು ಇಲ್ಲದೇ ಪರೆದಾಡುವ ಪರಸ್ಥಿತಿ ಉಂಟಾಗಿದ್ದು,ಸಾರ್ವಜನಿಕರ ಗೋಳು ಹೇಳತೀರದು.
ಕೂಡಲೇ ಭದ್ರಾ ಜಲಾಶಯದಿಂದ ತುಂಗಭದ್ರ ನದಿಗೆ ನೀರು ಹರಿಸಬೇಕು. ಶೀಘ್ರವೇ ಕಂಚರಗಟ್ಟಿ ಹತ್ತಿರ ನೀರು ತಡೆದು ಸಾರ್ವಜನಿಕರಿಗೆ, ಪ್ರಾಣಿ, ಪಕ್ಷಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳವಂತಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಬಿಎಸ್ಪಿ ಪಕ್ಷದ ಅಶೋಕ ಮರೆಣ್ಣನವರ,ಮಂಜುನಾಥ ಎನ್,ಬಿ.ಶಿವಕುಮಾರ ತಳವಾರ.ರುದ್ರಯ್ಯ ಸಾಲಿಮಠ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
