ಕನಕದಾಸರ ಸರ್ಕಲ್ ನಾಮಫಲಕ ಪುನರ್ ಪ್ರತಿಷ್ಟಾಪಿಸಿ..!

ಹುಳಿಯಾರು

    ಹುಳಿಯಾರಿನ ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಬಳಿಯ ವೃತ್ತದಲ್ಲಿ ಹದಿನೈದು ವರ್ಷಗಳಿಂದ ಇರುವಂತೆ ಕನಕದಾಸರ ಸರ್ಕಾಲ್ ನಾಮಫಲಕವನ್ನು ಪುನರ್ ಪ್ರತಿಷ್ಟಾಪಿಸುವಂತೆ ಹುಳಿಯಾರು ಹೋಬಳಿಯ ಕುರುಬ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಅನೇಕ ವರ್ಷಗಳಿಂದಲೂ ಖಾಲಿಯಿದ್ದ ಸರ್ಕಲ್‍ನಲ್ಲಿ ಎರಡು ದಶಕಗಳ ಹಿಂದೆ ಕನಕ ಯುವ ಸೇನೆಯ ಯುವಕರು ಕನಕದಾಸ ಸರ್ಕಲ್ ಎಂಬ ನಾಮಫಲಕ ಹಾಕಿ ಅಲ್ಲಿಂದ ಇಲ್ಲಿಯವರೆವಿಗೂ ಇದೇ ಸರ್ಕಲ್‍ನಲ್ಲಿ ಕನಕದಾಸ ಜಯಂತಿ ಆಚರಿಸಿ ಅನ್ನಸಂತರ್ಪಣೆ ಸಹ ಮಾಡಿಕೊಂಡು ಬರುತ್ತಿದ್ದರು.

    ಇದನ್ನು ಗಮಿಸಿದ ಗ್ರಾಪಂ 2006 ರಲ್ಲಿ ಈ ಸರ್ಕಲ್‍ಗೆ ಕನಕದಾಸರ ಸರ್ಕಲ್ ಎಂದು ನಾಮಕರಣ ಮಾಡಿ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲೂ ಅನುಮೋದನೆ ಕೊಟ್ಟಿದೆ. ಹಾಗಾಗಿ ಈ ಬಾರಿಯ ಕನಕಜಯಂತಿ ಆಚರಣೆಗಾಗಿ ಹೈವೆಯವರು ಕಾಮಗರಿಗಾಗಿ ತೆರವು ಮಾಡಿದ್ದ ನಾಮಫಲಕವನ್ನು ಪುನರ್ ಪ್ರತಿಷ್ಟಾಪಿಸಲಾಗಿತ್ತು.

    ಎರಡು ದಶಕಗಳಿಂದ ಯಾರೊಬ್ಬರೂ ಆಕ್ಷೇಪ ಸಲ್ಲಿಸದಿದ್ದ ನಾಮಫಲಕಕ್ಕೆ ಈಗ ಹೈವೆ ಕಾಮಗಾರಿ ಮುಗಿದು ಸರ್ಕಲ್ ಸುಂದರವಾಗಿಯೂ ಆಕರ್ಷಕವಾಗಿಯೂ ಕಾಣಲಾರಂಭಿಸಿದಾಗ ಹುಳಿಯಾರು ಪಟ್ಟಣ ಪಂಚಾಯ್ತಿಗೆ ಒಳಪಡದ ಬೇಕೆ ಗ್ರಾಮಗಳ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾತ್ರೋರಾತ್ರಿ ಡಾ.ಶಿವಕುಮಾರಸ್ವಾಮಿ ಸರ್ಕಲ್ ಎಂಬ ಫಲಕ ಹಾಕಿ ಜಾತಿ ಸಂಘರ್ಷಕ್ಕೆ ಕಾರಣರಾಗಿದ್ದಾರೆ ಎಂದು ಅವರು ಜಿಲ್ಲಾಧಿಕಾರಿಗಳಿಗೆ ವಿವರಿಸಿದ್ದಾರೆ.

     ಈ ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಪೆಟ್ರೋಲ್ ಬಂಕ್ ಸರ್ಕಲ್‍ಗೆ ಕನಕದಾಸ ಸರ್ಕಲ್ ಎಂದು ನಾಮಕರಣ ಮಾಡಿ ನಾಮಫಲಕ ಪುನರ್ ಪ್ರತಿಷ್ಟಾಪಿಸುವಂತೆ ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿ 2006 ಕನಕದಾಸ ಸರ್ಕಲ್ ಮಾಡುವ ಬಗ್ಗೆ ಗ್ರಾಪಂ ಸಾಮಾನ್ಯ ಸಭೆಯ ನಡಾವಳಿ ಹಾಯಿದೇ ಸ್ಥಳದಲ್ಲಿ ಕನಕ ಜಯಂತಿ ಆಚರಿಸಿಕೊಂಡು ಬರುತ್ತಿದ್ದ ಬಗ್ಗೆ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.

     ಈ ಸಂದರ್ಭದಲ್ಲಿ ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಸಮಾಜದ ಮುಖಂಡರಾದ ಬಸವಲಿಂಗಯ್ಯ, ಎಚ್.ಆರ್. ರಂಗನಾಥ್, ಡಾ.ರಂಗನಾಥ್, ಎಚ್.ಅಶೋಕ್, ಲಕ್ಷ್ಮಿಕಾಂತ್ ಹಾಗೂ ಕನಕ ಯುವ ಸೇನೆಯ ಅಧ್ಯಕ್ಷರಾದ ಕೆಂಪರಾಜು, ಮಕಾಂಗ್ರೆಸ್ ಮುಖಂಡ ಗುರುಪ್ರಸಾದ್, ಜಿಲ್ಲಾ ಹಾಲು ಮತದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್. ದೊಡ್ಡಯ್ಯ ನಾಗರಾಜು, ಮಂಜುನಾಥ್, ರವಿ, ತಿಮ್ಮಣ್ಣ ಮೋಹನ್ ಕುಮಾರ್, ಪ್ರಭು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link