ತುಮಕೂರು:
ಮೋಟಾರ್‍ನ ಸ್ಟ್ರಾರ್ಟರ್ ಕೆಟ್ಟು ಹೋಗಿದ್ದು, ತುಮಕೂರು ನಗರದ ಕೆಲವು ಬಡಾವಣೆಗಳಿಗೆ ಕುಡಿಯುವ ನೀರು ಸರಬರಾಜಿಗೆ ತೊಂದರೆ ಉಂಟಾಗಿರುತ್ತದೆ. ಸಮಸ್ಯೆಯ ಬಗ್ಗೆ ಮಾಹಿತಿ ಪಡೆದ 30ನೇ ವಾರ್ಡಿನ ಸದಸ್ಯ ವಿಷ್ಣುವರ್ಧನ ಅವರು ಕೂಡಲೇ ಈ ಸಮಸ್ಯೆ ಸರಿಪಡಿಸದಿದ್ದರೆ ಜನರೊಂದಿಗೆ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದ್ದಾರೆ.
ತುಮಕೂರು ನಗರಕ್ಕೆ ಕುಡಿಯುವ ನೀರು ಹೇಮಾವತಿ ಬುಗುಡನಹಳ್ಳಿ ಕೆರೆಯಲ್ಲಿ ತುಂಬಿದ್ದರೂ ಸರಿಯಾಗಿ ಹಂಚಿಕೆಯಾಗದೆ ವಾರ್ಡ್ ನಂ.30 ಮತ್ತು 24 ರಲ್ಲಿ ಸುಮಾರು 9 ರಿಂದ 10 ದಿನವಾದರೂ ನೀರು ಕೊಡಲು ಸಮಸ್ಯೆಯಾಗಿದ್ದು, ಅ.1 ರಂದು ಬೆಳಗ್ಗೆ 6 ಗಂಟೆಗೆ 30ನೇ ವಾರ್ಡಿನ ಸದಸ್ಯರಾದ ವಿಷ್ಣುವರ್ಧನ್ ಮತ್ತು 24ನೇ ವಾರ್ಡಿನ ಸದಸ್ಯರಾದ ಶಿವರಾಮ ಅವರು ಪಿ.ಎನ್.ಆರ್.ಪಾಳ್ಯದ ಶುದ್ಧ ಕುಡಿಯುವ ನೀರಿನ ಶುದ್ಧೀಕರಣ ನಡೆಯುವ ಸ್ಥಳಕ್ಕೆ ಭೇಟಿ ಕೊಟ್ಟಾಗ ಅಲ್ಲಿ 330 ಹೆಚ್.ಪಿ. 3 ಮೋಟಾರ್‍ಗಳು ಇದ್ದು, 1 330 ಹೆಚ್.ಪಿ. ಕೆಟ್ಟು ಹೋಗಿದ್ದು, ಸುಮಾರು 20 ದಿನಗಳಾಗಿರುತ್ತವೆ ಮತ್ತು ಬುಗುಡನಹಳ್ಳಿ ಕೆರೆಯಿಂದ ಶುದ್ಧೀಕರಿಸಿದ ನೀರನ್ನು ಕುಪ್ಪೂರಿನಿಂದ ಪಿ.ಎನ್.ಆರ್.ಪಾಳ್ಯಕ್ಕೆ ಹೋಗಲು 3 ಮೋಟಾರು ಇದ್ದು, 1 ಮೋಟಾರ್ ಪಂಪು ಕೆಟ್ಟು ಹೋಗಿ ರಿಪೇರಿಗೆ ಕಳುಹಿಸಿರುತ್ತಾರೆ ಹಾಗೂ ಮತ್ತೊಂದು ಮೋಟಾರ್‍ನ ಸ್ಟಾರ್ಟರ್ ಕೆಟ್ಟು ಹೋಗಿರುತ್ತದೆ. 1 ಮೋಟಾರ್ ಮಾತ್ರ ಚಾಲನೆಯಲ್ಲಿರುತ್ತದೆ.
ಇದರಿಂದ ತುಮಕೂರು ನಗರಕ್ಕೆ ಕುಡಿಯುವ ನೀರಿನ ಸರಬರಾಜಿನಲ್ಲಿ ತೊಂದರೆಯಾಗಿರುತ್ತದೆ ಹಾಗೂ ಕಲುಷಿತ ನೀರು ಕೂಡ ಬರುತ್ತಿದೆ ಮತ್ತು ಪಿ.ಎನ್.ಆರ್.ಪಾಳ್ಯದಿಂದ ಶುದ್ಧೀಕರಿಸಿದ ನೀರು ಮಹಾನಗರ ಪಾಲಿಕೆಯ ಟ್ಯಾಂಕಿಗೆ ಬರುತ್ತದೆ. 30ನೇ ವಾರ್ಡ್ ಮತ್ತು 24ನೇ ವಾರ್ಡ್‍ಗೆ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ. ಎಲ್ಲಾ ಸಮಸ್ಯೆ ಇರುವುದರಿಂದ ಸರಿಯಾಗಿ ನಾಗರಿಕರಿಗೆ ಕುಡಿಯುವ ನೀರು ನೀಡಲು ಆಗುತ್ತಿಲ್ಲ. ಈ ಸಮಸ್ಯೆ ಮುಂದುವರೆದರೆ ನಾಗರಿಕರನ್ನು ಕರೆದುಕೊಂಡು ಬಂದು ನೀರಿಗಾಗಿ ಹೋರಾಟ ಮಾಡುತ್ತೇವೆಂದು 30ನೇ ವಾರ್ಡಿನ ಸದಸ್ಯರಾದ ವಿಷ್ಣುವರ್ಧನ್ ಮತ್ತು 24ನೇ ವಾರ್ಡಿನ ಸದಸ್ಯರಾದ ಶಿವರಾಮ ಅವರು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








